ರೋಗಿ ಕರೆದೊಯ್ಯಲು 1.20 ಲಕ್ಷ ಬಿಲ್ ಮಾಡಿದ ಅಂಬ್ಯುಲೆನ್ಸ್

ಚಂಡೀಗಢ: ಕೋವಿಡ್ ಸಂದರ್ಭದಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ,ಅಂಬ್ಯುಲೆನ್ಸ್‍ನವರು ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಆರೋಪಕ್ಕೆ ಇದೀಗ ದೆಹಲಿಯಲ್ಲಿ ನಡೆದ ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ.

ಗುರುಗಾಂನಿಂದ ಪಂಜಾಬ್‍ನ ಲೂಧಿಯಾನಕ್ಕೆ (350 ಕಿ.ಮೀ) ಕೊರೊನಾ ರೋಗಿಯನ್ನು ಕರೆದುಕೊಂಡು ಹೋಗಲು ಖಾಸಗಿ ಅಂಬ್ಯುಲೆನ್ಸ್ ಏಜೆನ್ಸಿಯೊಂದು ಬರೋಬ್ಬರಿ 1.20 ಲಕ್ಷ ರೂಪಾಯಿ ಬಿಲ್ ಮಾಡಿದೆ. ಕೊರೊನಾ ಸೋಂಕಿನಿಂದ ನರಳುತ್ತಿದ್ದ ವಯಸ್ಸಾದ ವೃದ್ಧಯೊರ್ವಳಿಗೆ ಗುರುಗಾಂವ್ ಆಸ್ಪತ್ರೆಗಳಲ್ಲಿ ಬೆಡ್ ದೊರೆತಿರಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಬೆಡ್ ಸಿಗದೆ ಇದ್ದಾಗ ಪಂಜಾಬ್‍ನ ಲೂಧಿಯಾನಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಈ ವೇಳೆಯೂ ಅಂಬುಲೆನ್ಸ್ ಕೊರತೆ ಎದುರಾಗಿತ್ತು. ಕೊನೆಗೆ ದೆಹಲಿ ಮೂಲದ ಖಾಸಗಿ ಅಂಬುಲೆನ್ಸ್ ಸಿಕ್ಕಿತ್ತು. 350ಕಿ.ಮೀ ಪ್ರಯಾಣಕ್ಕೆ ಅಂಬುಲೆನ್ಸ್ ಆಪರೇಟರ್ 1 ಲಕ್ಷದಾ 40 ಸಾವಿರ ರೂಪಾಯಿ ಪಾವತಿಸುವಂತೆ ಕೇಳಿದ್ದಾನೆ. ಕೊನೆಗೂ ಮನವಿ ಮಾಡಿಕೊಂಡಾಗ 20 ಸಾವಿರ ರೂಪಾಯಿ ಕಡಿಮೆ ಮಾಡಿದ್ದಾರೆ.

ಪ್ರಯಾಣ ಆರಂಭಕ್ಕೂ ಮುನ್ನವೇ 95,000 ರೂಪಾಯಿ ಕಟ್ಟಲಾಗಿದೆ. ಆಸ್ಪತ್ರೆ ತಲುಪಿದ ಬಳಿಕ ಬಾಕಿ ಮೊತ್ತವನ್ನು ಸಂದಾಯ ಮಾಡಲಾಗಿದೆ. ಹಣ ಪಡೆದಿದ್ದಕ್ಕೆ ಏರ್ ಅಂಬ್ಯುಲೆನ್ಸ್‍ನವರು ಪಾವತಿಯನ್ನು ನೀಡಿದ್ದಾರೆ. ಲೂಧಿಯಾನದಲ್ಲಿ ವೃದ್ಧೆಗೆ ಬೇಡ್ ದೊರೆತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬ್ಯುಲೆನ್ಸ್‍ನವರಿಗೆ ನೀಡಲಾದ 1.20 ಲಕ್ಷ ರೂ. ಬಿಲ್ ವೃದ್ಧೆಯ ಕುಟುಂಬದವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸರು ಅಂಬ್ಯುಲೆನ್ಸ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *