ರುಂಡ ಮುಂಡ ಬೇರೆ ಮಾಡಿ ಕೊಲೆ ಮಾಡಿದ್ದ ಆರೋಪಿಗಳು ಅಂದರ್ – ಕೊಲೆಗೆ ಕಾರಣ ಸೀರಿಯಲ್ ನಟಿ

ಧಾರವಾಡ: ಹುಬ್ಬಳ್ಳಿಯಲ್ಲಿ ರುಂಡ ಮುಂಡ ಬೇರೆ ಮಾಡಿ ಕೊಲೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಧಾರವಾಡ ಜಿಲ್ಲಾ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದು, ಆರೋಪಿಗಳನ್ನು ವಿಚಾರಿಸಿದಾಗ ಕೊಲೆಗೆ ಕಾರಣ ಸೀರಿಯಲ್ ನಟಿ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಏಪ್ರಿಲ್ 11 ರಂದು ಹುಬ್ಬಳ್ಳಿಯ ದೇವರಗುಡಿಹಾಳ ಬಳಿ ವ್ಯಕ್ತಿಯೋರ್ವನ ರುಂಡ ಪತ್ತೆಯಾಗಿತ್ತು. ಬಳಿಕ ಅದೇ ದಿನ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುಂಡ ಇಲ್ಲದ ಮುಂಡ ಅರೇ ಬರೆ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು. ಈ ಪ್ರಕರಣದ ಬೆನ್ನಟ್ಟಿದ ಧಾರವಾಡ ಜಿಲ್ಲಾ ಪೊಲೀಸರು, ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಇದೀಗ ಕೊಲೆಯಾದವನನ್ನು ರಾಕೇಶ್ ಕಾಟವೆ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ನಿಯಾಜ್ ಅಹ್ಮದ್ ಕಟವೆ, ತೌಸಿಫ್ ಚಿನ್ನಾಪೂರ, ಅಲ್ತಾಫ ಮುಲ್ಲಾ ಹಾಗೂ ಅಮನ ಗರಣಿವಾಲೆ ಎಂಬುವವರನ್ನು ಬಂಧಿಸಿದ್ದಾರೆ. ಪ್ರಮುಖ ಕೊಲೆ ಆರೋಪಿ ನಿಯಾಜ್ ಹಾಗೂ ಕೊಲೆಯಾದ ರಾಕೇಶ್ ಕಾಟವೆ ಸಹೋದರಿಯ ನಡುವೆ ಪ್ರೇಮ ಇತ್ತು. ಇದೇ ವಿಚಾರಕ್ಕೆ ಪ್ರೇಯಸಿಗಾಗಿ ನಿಯಾಜ್ ತನ್ನ ಸಂಗಡಿಗರ ಜೊತೆ ಸೇರಿ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ರಾಕೇಶ್ ಕಾಟವೆ ಸಹೋದರಿ ಧಾರಾವಾಹಿಗಳಲ್ಲಿ ಕೂಡಾ ಕೆಲಸ ಮಾಡಿದ್ದಾಳೆ, ಅಲ್ಲದೇ ಮಾಡೆಲಿಂಗ್ ಕೂಡ ಮಾಡುತಿದ್ದಳು ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಪೊಲೀಸರು, ಹೆಚ್ಚಿನ ತನಿಖೆ ಮುಂದುವರಿಸಿರುವುದಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಅವರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *