ರಿವೀಲ್ ಆಯ್ತು ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಲುಕ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಈ ಸಿನಿಮಾದಲ್ಲಿ ಸುದೀಪ್ ಜೊತೆ ಸೊಂಟ ಬಳುಕಿಸಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಫಸ್ಟ್ ಪೋಸ್ಟರ್‌ನನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ವಿಕ್ರಾಂತ್ ರೋಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಅನೂಪ್ ಬಂಡಾರಿ ಶುಕ್ರವಾರ ವಿಆರ್ ಜೊತೆ ಜಿಆರ್ ಎಂದರೆ ಏನು ಗೆಸ್ ಮಾಡಿ ಎಂದು ಅಭಿಮಾನಿಗಳ ಮುಂದೆ ಪ್ರಶ್ನೆ ಮುಂದಿಟ್ಟಿದ್ದರು. ಜೊತೆಗೆ ಈ ಆಟ ನಾಳೆಯವರೆಗೂ ಮುಂದುವರಿಯುತ್ತದೆ ಎಂದು ತಿಳಿಸಿದ್ದರು.

ಇದೀಗ ಚಿತ್ರತಂಡ ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಅವತಾರ ರಿವೀಲ್ ಮಾಡಿದ್ದು, ಜಿಆರ್ ಎಂದರೆ ಗಡಂಗ ರಕ್ಕಮ್ಮ ಎಂದು ಬಹಿರಂಗಗೊಳಿಸಿದ್ದಾರೆ. ರಕ್ಕಮ್ಮನಿಗೆ ಗೊತ್ತಿಲ್ಲದೇ ಇರುವುದು ಏನು ಇಲ್ಲ ಎನ್ನುತ್ತಾ ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್‍ನನ್ನು ರಕ್ಕಮ್ಮ ಪಾತ ಪರಿಚಯಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಪೋಸ್ಟರ್‌ನಲ್ಲಿ ಜಾಕ್ವೆಲಿನ್ ಕೈನಲ್ಲಿ ಮದ್ಯ ಬಾಟಲ್ ಹಿಡಿದು ಸಖತ್ ಆಗಿ ಪೋಸ್ ನೀಡಿದ್ದಾರೆ. ಜೊತೆಗೆ ಪೋಸ್ಟರ್‌ನಲ್ಲಿ ಬರುವ ಹಿನ್ನೆಲೆ ಸಂಗೀತ ಸಖತ್ ಆಗಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕೂತೂಹಲ ಕೆರಳಿಸುತ್ತಿದೆ.

ಇದೇ ಪ್ರಥಮ ಬಾರಿಗೆ ಕನ್ನಡದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸುದೀಪ್ ಜೊತೆ ಸ್ಟೆಪ್ ಹಾಕಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣಗೆ ನಿರ್ದೇಶಕ ಅನೂಪ್ ಬಂಡಾರಿ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾವನ್ನು ಅದ್ದೂರಿಯಾಗಿ ತೆರೆಮೇಲೆ ಬರಲಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದ ಮರ್ಡರ್ ಬೆಡಗಿ

Comments

Leave a Reply

Your email address will not be published. Required fields are marked *