ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

-ಪೊಲೀಸ್ ರಕ್ಷಣೆ ಬೇಕೆಂದು ರಿಯಾ ಮನವಿ

ಮುಂಬೈ: ನಟಿ ರಿಯಾ ಚಕ್ರವರ್ತಿ ನನ್ನ ಮಗನಿಗೆ ದೀರ್ಘ ಸಮಯದಿಂದ ಹಂತ ಹಂತವಾಗಿ ವಿಷ ನೀಡಿ ಕೊಂದಳು ಎಂದು ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ.ಕೆ.ಸಿಂಗ್ ಆರೋಪಿಸಿದ್ದಾರೆ. ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಇಂದು ರಿಯಾ ತಂದೆ ಇಂದ್ರಜಿತ್ ಮುಖರ್ಜಿ ಅವರನ್ನ ವಿಚಾಚರಣೆಗೆ ಒಳಪಡಿಸಿದ್ದಾರೆ. ಇಂದು ಬೆಳಗ್ಗೆ ರಿಯಾ ಮನೆಗೆ ಬಂದ ಪೊಲೀಸರು ನೋಟಿಸ್ ನೀಡಿದ್ದರು. ಮಧ್ಯಾಹ್ನ ಇಂದ್ರಜಿತ್ ಚಕ್ರವರ್ತಿ ಪೊಲೀಸರ ಭದ್ರೆತೆಯಲ್ಲಿ ಮನೆಯಿಂದ ಕರೆದುಕೊಂಡು ಹೋಗಲಾಗಿದೆ. ಇದಕ್ಕೂ ಮೊದಲು ಇನ್‍ಸ್ಟಾಗ್ರಾಂ ಪೋಸ್ಟ್ ಮಾಡಿದ್ದ ರಿಯಾ ತಮಗೆ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸುಶಾಂತ್ ಮನೆ ರಿಯಾ ತೊರೆಯುವ ಮುನ್ನ 8 ಹಾರ್ಡ್ ಡಿಸ್ಕ್ ಡೇಟಾ ಡಿಲೀಟ್

ಇನ್‍ಸ್ಟಾಗ್ರಾಂನಲ್ಲಿ ಮನೆಯ ಮುಂದೆ ಪೊಲೀಸರು ಮತ್ತು ಮಾಧ್ಯಮ ಸಿಬ್ಬಂದಿ ನಿಂತಿರುವ ವಿಡಿಯೋ ಪೋಸ್ಟ್ ಮಾಡಿರುವ ರಿಯಾ, ನನ್ನ ಮತ್ತು ನಮ್ಮ ಕುಟುಂಬದವರ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆದ್ರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ. ತನಿಖೆ ನಡೆಸುತ್ತಿರೋ ಏಜೆನ್ಸಿಯಿಂದಲೂ ಸಹಾಯ ಕೇಳಿದ್ರೂ ಯಾವ ಪ್ರಯೋಜನ ಆಗಿಲ್ಲ. ಪ್ರಕರಣದ ತನಿಖೆ ನಡೆಸ್ತಿರೋ ಏಜೆನ್ಸಿಗೆ ಸಹಕರಿಸಲು ನಮಗೆ ಸೂಕ್ತ ಭದ್ರತೆ ನೀಡಬೇಕೆಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

https://www.instagram.com/p/CEYg61Nnwoe/?utm_source=ig_embed

ಡಿಆರ್‍ಡಿಓ ಗೆಸ್ಟ್ ಹೌಸ್ ನಲ್ಲಿ ರಿಯಾ ಸೋದರ ಶೌವಿಕ್ ಮತ್ತು ತಂದೆ ಇಂದ್ರಜಿತ್ ಅವರನ್ನ ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಇತ್ತ ಸಿದ್ಧಾರ್ಥ್ ಪಿಠಾಣಿ ವಿಚಾರಣೆ ಐದನೇ ದಿನವೂ ಮುಂದುವರಿದಿದೆ. ಇಂದು ಸಿಬಿಐ ಅಧಿಕಾರಿಗಳು ಓರ್ವ ಮಹಿಳೆಯನ್ನ ಕರೆಸಿದ್ದಾರೆ. ವಿಚಾರಣೆಗೆ ಹಾಜರಾಗಿರುವ ಮಹಿಳೆ ಯಾರು? ಪ್ರಕರಣಕ್ಕೆ ಮಹಿಳೆಗೆ ಏನು ಸಂಬಂಧ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Comments

Leave a Reply

Your email address will not be published. Required fields are marked *