ರಾಹುಲ್ ಗಾಂಧಿ ಬ್ರೇಕ್‍ಫಾಸ್ಟ್ ಮೀಟಿಂಗ್ – ಸಂಸತ್‍ವರೆಗೂ ಸೈಕಲ್ ಮಾರ್ಚ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಯೋಜಿಸಿರುವ ಉಪಹಾರ ಕೂಟದಲ್ಲಿ ವಿಪಕ್ಷ ನಾಯಕರು ಸೇರಿದ್ದು, ಚರ್ಚೆ ನಡೆಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್, ಶಿವಸೇನೆ, ಸಮಾವಾದಿ ಪಾರ್ಟಿ ಸೇರಿದಂತೆ ಅನೇಕ ವಿಪಕ್ಷ ನಾಯಕರು ಉಪಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ವಿಪಕ್ಷಗಳು ಪೆಗಾಸಸ್ ಗೂಢಚಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳು ಈ ಸಂಬಂಧ ಚರ್ಚೆಗೆ ಆಗ್ರಹಿಸುತ್ತಿವೆ. ವಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ರಾಹುಲ್ ಗಾಂಧಿ ಉಪಹಾರಕೂಟ ಆಯೋಜಿಸಿದ್ದರು ಎಂದು ವರದಿಯಾಗಿದೆ.

ಉಪಹಾರ ಕೂಟದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿಪಕ್ಷಗಳ ಮಧ್ಯೆ ಏನೇ ವಾದಗಳಿರಬಹುದು. ಆದ್ರೆ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ಧ್ವನಿ ಎತ್ತಬೇಕಿದೆ. ಹಾಗಾಗಿ ಸಭೆ ಬಳಿಕ ಎಲ್ಲರೂ ಸೈಕಲ್ ಮೂಲಕ ಅಧಿವೇಶನಕ್ಕೆ ತೆರಳೋಣ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಮಾತಿನಂತೆ ವಿಪಕ್ಷ ನಾಯಕರು ಸೈಕಲ್ ಮೇಲೆ ಸಂಸತ್ ಬಂದು ತೈಲ ಬೆಲೆ ಏರಿಕೆಯನ್ನು ಖಂಡಿಸಿದರು.

ಸರ್ಕಾರ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ನಮ್ಮ ಪ್ರತಿಭಟನೆ ರಸ್ತೆಯಿಂದ ಸಂಸತ್ ವರೆಗೂ ನಡೆಯಬೇಕು. ಅದೇ ರೀತಿ ಸದನದಲ್ಲಿ ಕೊರೊನಾ ಮತ್ತು ಪೆಗಾಸಸ್ ಸಂಬಂಧ ಸುಧೀರ್ಘ ಚರ್ಚೆ ನಡೆಯಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: 2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್

ರಾಹುಲ್ ಗಾಂಧಿ ಉಪಹಾರಕೂಟದಲ್ಲಿ ಭಾಗಿಯಾದ ಪಕ್ಷಗಳು: INC, NCP, SS, RJD, SP, CPIM, CPI, IUML, RSP, KCM, JMM, NC, TMC,LJD

Comments

Leave a Reply

Your email address will not be published. Required fields are marked *