ರಾಯರ ದರ್ಶನ ಪಡೆಯುವುದೇ ಪುಣ್ಯ, ಸನ್ಮಾನ ಮುಖ್ಯವಲ್ಲ- ಮಂತ್ರಾಲಯದಲ್ಲಿ ದರ್ಶನ್‌

ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು.

ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ದರ್ಶನ್‍ಗೆ ಸನ್ಮಾನಿಸಿ ಆಶೀರ್ವಚನ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ದರ್ಶನ್ ರಾಯರ ಅನುಗ್ರಹದಿಂದ ಮಾತ್ರ ಮಂತ್ರಾಲಯಕ್ಕೆ ಬರಲು ಸಾಧ್ಯ ಎಂದರು.

ಇದಕ್ಕೂ ಮುನ್ನ ರಾಯರ ವೃಂದಾವನ ದರ್ಶನ ಪಡೆದು ಬಳಿಕ ಮಾತನಾಡಿದ ದರ್ಶನ್ ರಾಯರ ದರ್ಶನ ಪಡೆಯುವುದೇ ಪುಣ್ಯ, ಸನ್ಮಾನ ಮುಖ್ಯವಲ್ಲ.ರಾಬರ್ಟ್ ಸಿನೆಮಾ ತನ್ನ ಪಾಡಿಗೆ ತಾನು ಯಶಸ್ವಿಯಾಗುತ್ತಿದೆ. ರಾಬರ್ಟ್ 100 ದಿನ ಓಡಬಹುದು ಕಾದು ನೋಡಿ ಎಂದರು.

ಈಗ ರಾಬರ್ಟ್ ನಡೆಯುತ್ತಿದೆ. ಮುಂದಿನ ಪ್ರಾಜೆಕ್ಟ್ ಮುಂದೆ ನೋಡೋಣ. ಅಭಿಮಾನಿಗಳು ಸಿನೆಮಾ ನೋಡುತ್ತಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಅಂತ ಕೃತಜ್ಞತೆ ತಿಳಿಸಿದರು.

ಪೈರಸಿ ನಂತರವೂ ರಾಬರ್ಟ್‌ ಸಿನಿಮಾ ಓಡುತ್ತಿದೆ. ಪೈರಸಿ ಮಾಡಿ ಏನು ಮಾಡಿದರೋ ಅವರನ್ನೇ ಕೇಳಬೇಕು ಅಂತ ಅಸಮಾಧಾನ ವ್ಯಕ್ತಪಡಿಸಿದರು. ಮಂತ್ರಾಲಯದಲ್ಲೂ ಅಭಿಮಾನಿಗಳು ಡಿ ಬಾಸ್ ಎಂದು ಘೋಷಣೆ ಕೂಗಿ ತಮ್ಮ ನೆಚ್ಚಿನ ನಟನನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *