ರಾಯಚೂರು ನಗರಸಭೆಯಿಂದಾಗದ ಕೆಲಸವನ್ನು ಮಾಡಿದ ಪೊಲೀಸರು

-ವಾರಸುದಾರರಿಲ್ಲದ 34 ಜಾನುವಾರುಗಳು ಗೋಶಾಲೆಗೆ ರವಾನೆ

ರಾಯಚೂರು: ನಗರದ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಬೀಡಾಡಿ ದನಗಳನ್ನ ಹಿಡಿದು ಪೊಲೀಸರು ಗೋಶಾಲೆಗೆ ಬಿಟ್ಟಿದ್ದಾರೆ. ನಗರಸಭೆ ಮಾಡಬೇಕಾದ ಕೆಲಸವನ್ನ ರಾಯಚೂರು ಪೊಲೀಸರು ಮಾಡಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವವ ಬೈಕ್ ಜಪ್ತಿ ಮಾಡಿ ದಂಡ ಹಾಕುತ್ತಿರುವ ಪೊಲೀಸರು ಜಾನುವಾರುಗಳನ್ನ ಗೋಶಾಲೆಗೆ ತಲುಪಿಸಿದ್ದಾರೆ. ವಾರಸುದಾರರಿಲ್ಲದ ಒಟ್ಟು 34 ಜಾನುವಾರುಗಳನ್ನ ಹಿಡಿದು ಗೋಶಾಲೆಗೆ ಸಾಗಿಸಿದ್ದಾರೆ.

ನಗರದ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರು ನಗರಸಭೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಬೀಡಾಡಿ ದನಗಳು ರಸ್ತೆಯಲ್ಲೆ ಓಡಾಡುತ್ತಿದ್ದರಿಂದ ವಾಹನ ಸಂಚಾರಕ್ಕೆ ತುಂಬಾ ಅಡತಡೆಯಾಗುತ್ತಿತ್ತು. ಗೋವುಗಳ ವಾರಸುದಾರರಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಮತ್ತೆ ಮತ್ತೆ ಬೀದಿಗೆ ಬಿಡುವುದರಿಂದ ತೊಂದರೆ ತಪ್ಪಿರಲಿಲ್ಲ.

ದನಕರುಗಳನ್ನು ಬೀದಿಗೆ ಬಿಡುವುದರಿಂದ ಅಪಘಾತಗಳು, ಕಳ್ಳತನ ಪ್ರಕರಣಗಳು ಸಹ ನಡೆಯುತ್ತಿರುವುದರಿಂದ ಇದು ಪೊಲೀಸರಿಗೂ ತಲೆನೋವಾಗಿತ್ತು. ಹೀಗಾಗಿ ಪೊಲೀಸರೇ ಜಾನುವಾರುಗಳನ್ನ ಗೋಶಾಲೆಗೆ ಬಿಟ್ಟಿದ್ದಾರೆ. ಅಲ್ಲದೆ ಜಿಲ್ಲೆಯ ಸಾರ್ವಜನಿಕರು ತಮ್ಮ ತಮ್ಮ ದನಕರುಗಳನ್ನು ಬೀದಿಗೆ ಬರದಂತೆ ನೋಡಿಕೊಳ್ಳಿ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *