ರಾಯಚೂರಿನ ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರ ರಕ್ಷಣೆ

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ನಡುಗಡ್ಡೆಯೊಂದರಲ್ಲಿ ಸಿಲುಕಿದ್ದ ರೈತರನ್ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ತಂಡ ರಕ್ಷಣೆ ಮಾಡಿದೆ. ಶೀಲಹಳ್ಳಿ ಸೇತುವೆ ಬಳಿಯ ತವದಗಡ್ಡಿಯಲ್ಲಿ ಸಿಲುಕಿದ್ದ ಮೂವರು ರೈತರು ಈಗ ಸುರಕ್ಷಿತವಾಗಿ ಹೊರಬಂದಿದ್ದಾರೆ. ಶೀಲಹಳ್ಳಿ ಗ್ರಾಮದ ದುರ್ಗಪ್ಪ, ಹುಲಗಪ್ಪ, ನಿರುಪಾದಿ ನಡುಗಡ್ಡೆಯಲ್ಲಿ ರೈತರು ಸಿಲುಕಿದ್ದರು.

ಕೃಷಿ ಚಟುವಟಿಕೆಗಾಗಿ ನಡುಗಡ್ಡೆ ಜಮೀನಿಗೆ ತೆರಳಿದ್ದ ರೈತರು ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಸಿಲುಕಿಕೊಂಡಿದ್ದರು. ರಕ್ಷಣಾಕಾರ್ಯಕ್ಕೆ ರಾತ್ರಿಯಲ್ಲಾ ಸ್ಥಳದಲ್ಲೇ ಬೀಡುಬಿಟ್ಟಿದ್ದ ಎನ್‌ಡಿಆರ್‌ಎಫ್‌ ತಂಡ ಮಧ್ಯರಾತ್ರಿಯೇ ರಕ್ಷಣಾ ಕಾರ್ಯಾಚರಣೆ ನಡೆಸಿ ರೈತರನ್ನ ಸುರಕ್ಷಿತವಾಗಿ ಹೊರತಂದಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಸಂಚಾರ ಬಂದ್- ಕೊಟ್ಟಿಗೆಹಾರದಲ್ಲಿಯೇ ಜನ ಲಾಕ್

ನಾರಾಯಣಪುರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡುವ ಸಾಧ್ಯತೆಯಿದೆ. ಹೀಗಾಗಿ ಪ್ರವಾಹದ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಒಂದು ಎನ್‌ಡಿಆರ್‌ಎಫ್‌ ತಂಡವನ್ನು ಲಿಂಗಸುಗೂರು ತಾಲೂಕಿನಲ್ಲಿ ಮತ್ತೊಂದು ಎನ್‌ಡಿಆರ್‌ಎಫ್‌ ತಂಡವನ್ನು ದೇವದುರ್ಗ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿಯೋಜಿಸಿದೆ.

Comments

Leave a Reply

Your email address will not be published. Required fields are marked *