ರಾಯಚೂರಿನಲ್ಲಿ ಹೊಸ ಹತ್ತು ಪ್ರಕರಣ ಪತ್ತೆ- 26ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ರಾಯಚೂರು: ಜಿಲ್ಲೆಯಲ್ಲಿ ಇಂದು ಹತ್ತು ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹಾರಾಷ್ಟ್ರದ ನಂಟಿನಿಂದ ರಾಯಚೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26 ಕ್ಕೇರಿದೆ.

ದೇವದುರ್ಗ ತಾಲೂಕಿನ ಮಸರಕಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ 1 ವರ್ಷ ಹಾಗೂ 4 ವರ್ಷದ ಗಂಡು ಮಕ್ಕಳು, 13 ವರ್ಷ ಹಾಗೂ 17 ವರ್ಷದ ಹೆಣ್ಣು ಮಕ್ಕಳಿದ್ದಾರೆ.

ರೋಗಿ-1713 ರಿಂದ ರೋಗಿ-1722 ವರೆಗೆ ಕ್ರಮವಾಗಿ ರಾಯಚೂರಿನವರಲ್ಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಪುನಃ ಮಹಾರಾಷ್ಟ್ರದಿಂದ ಬಂದವರಲ್ಲೇ ಪಾಸಿಟಿವ್ ಪ್ರಕರಣಗಳು ಬಂದಿವೆ. ಇದುವರೆಗೆ ಜಿಲ್ಲೆಯಿಂದ 6292 ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 26 ಪ್ರಕರಣ ಪಾಸಿಟಿವ್ ಬಂದಿವೆ. ಸೋಂಕು ಧೃಡಪಟ್ಟವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆ ಐಸೋಲೇಷನ್ ವಾರ್ಡ್‍ನಲ್ಲಿಡಲಾಗಿದೆ.

Comments

Leave a Reply

Your email address will not be published. Required fields are marked *