ರಾತ್ರಿ 10 ರಿಂದ ಬೆಳಗ್ಗೆ 5 ವರೆಗೆ ದೆಹಲಿಯಲ್ಲಿ ನೈಟ್ ಕರ್ಫ್ಯೂ!

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಇದೀಗ ನೈಟ್ ಕರ್ಫ್ಯೂ ಹಾಕಲು ಮುಂದಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೊರೊನಾ ನಾಲ್ಕನೇ ಅಲೆ ಬೀಸಲು ಆರಂಭಿಸಿದೆ. ಆದರೆ ಲಾಕ್‍ಡೌನ್ ಹೇರಲು ನಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವುದರಿಂದಾಗಿ ಲಾಕ್‍ಡೌನ್ ಬದಲಾಗಿ ನೈಟ್‍ ಕರ್ಫ್ಯೂ ಹಾಕಲು ದೆಹಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದಂತೆ, ದೆಹಲಿಯಲ್ಲಿ ಲಾಕ್‍ಡೌನ್ ಅವಶ್ಯಕತೆ ಇಲ್ಲ. ಆದರೆ ಸ್ಥಿತಿಗತಿಯ ಕುರಿತು ಸರ್ಕಾರ ಸೂಕ್ಷ್ಮ ಕಣ್ಣಿಟ್ಟಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ದೆಹಲಿಯಲ್ಲಿ ನೈಟ್‍ ಕರ್ಫ್ಯೂ ಕುರಿತಾಗಿ ಸರ್ಕಾರ ಚಿಂತನೆ ನಡೆಸುತ್ತಿದ್ದು, ಸಮಯವನ್ನು ನಿಗದಿಪಡಿದೆ. ರಾತ್ರಿ 10 ರಿಂದ ಬೆಳಗ್ಗೆ 5 ವರೆಗೆ ನೈಟ್‍ ಕರ್ಫ್ಯೂ ಇರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕಳೆದ ಒಂದೇ ದಿನ 3,548 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಇದರೊಂದಿಗೆ ಒಂದೇ ದಿನದಲ್ಲಿ ಕೊರೊನಾದಿಂದಾಗಿ 15 ಸಾವುಕೂಡ ಸಂಭವಿಸಿತ್ತು.

Comments

Leave a Reply

Your email address will not be published. Required fields are marked *