– ಇಂದು 6,940 ಡಿಸ್ಚಾರ್ಜ್ – 7,908 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಇಂದು 7,908 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 6,940 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 104 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿಕೆಯಾಗಿದೆ. ಈ ಪೈಕಿ 79,201 ಸಕ್ರಿಯ ಪ್ರಕರಣಗಳಿದ್ದರೆ 1,28,182 ಮಂದಿ ಬಿಡುಗಡೆಯಾಗಿದ್ದಾರೆ.

ಇಲ್ಲಿಯವರೆಗೆ ಒಟ್ಟು 3,717 ಮಂದಿ ಮೃತಪಟ್ಟಿದ್ದು, ಐಸಿಯುನಲ್ಲಿ 747 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 56,638 ಮಂದಿಗೆ ಪರೀಕ್ಷೆ ಮಾಡಿದ್ದು, ಒಟ್ಟು 19,38,954 ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರು ನಗರ 2,452, ಬಳ್ಳಾರಿ 608, ಶಿವಮೊಗ್ಗ 413, ದಾವಣಗೆರೆ 351. ಬೆಳಗಾವಿಯಲ್ಲಿ 334 ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನಲ್ಲಿ 2,146, ಉಡುಪಿ 614, ಮೈಸೂರು 412, ದಕ್ಷಿಣ ಕನ್ನಡ 242, ಕಲಬುರಗಿಯಲ್ಲಿ 376 ಮಂದಿ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಮರಣ ಪ್ರಮಾಣ ಶೇ.1.76 ರಷ್ಟಿದ್ದರೆ ಚೇತರಿಕೆ ಪ್ರಮಾಣ ಶೇ.59.92ರಷ್ಟಿದೆ. ಬೆಂಗಳೂರಿನಲ್ಲಿ ಮರಣ ಪ್ರಮಾಣ ಶೇ.1.62ರಷ್ಟಿದ್ದರೆ ಚೇತರಿಕೆ ಪ್ರಮಾಣ ಶೇ.56.67ರಷ್ಟಿದೆ.

Leave a Reply