ರಾಜ್ಯದಲ್ಲಿ 14 ದಿನಗಳ ಬಿಗಿ ಲಾಕ್‍ಡೌನ್ ಸ್ಟಾರ್ಟ್ – ಅಗತ್ಯವಸ್ತು ಖರೀದಿಗೆ 4 ಗಂಟೆ ಪರ್ಮಿಷನ್

ಬೆಂಗಳೂರು: ರಾಜ್ಯದಲ್ಲಿ 14 ದಿನಗಳ ಬಿಗಿ ಲಾಕ್‍ಡೌನ್ ಇಂದಿನಿಂದ ಶುರುವಾಗಿದೆ. ಇವತ್ತಿನಿಂದ ಮತ್ತೆ ಕರ್ನಾಟಕ ಲಾಕ್ ಆಗುತ್ತಿದ್ದು, ಮೇ 24 ಬೆಳಗ್ಗೆ 6 ಗಂಟೆವರೆಗೆ ಇಡೀ ರಾಜ್ಯ ಲಾಕ್ ಆಗಲಿದೆ. ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಂದ್ ಆಗುತ್ತಿದೆ. ಬೆಳಗ್ಗೆ 10 ಗಂಟೆ ನಂತರ ಹೊರಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆ ಅಷ್ಟೇ ಸಮಯ ಇರಲಿದೆ. ಬೆಳಗ್ಗೆ 6 ರಿಂದ 10ಗಂಟೆ ಒಳಗೆ ಬಂದ್ರೆ ಅಗತ್ಯವಸ್ತುಗಳು ಸಿಗುತ್ತವೆ. ಮಾಂಸ ಖರೀದಿಗೂ ಬೆಳಗ್ಗೆ 10 ಗಂಟೆವರೆಗೆ ಅವಕಾಶ ಇರಲಿದ್ದು, ತಳ್ಳುಗಾಡಿಯಲ್ಲಿ ಸಂಜೆವರೆಗೂ ತರಕಾರಿ ಮಾರಾಟಕ್ಕೆ ಚಾನ್ಸ್ ಇದೆ.

ಏನಿರಲ್ಲ…?
* ಅಂತರ್ ಜಿಲ್ಲಾ ಓಡಾಟ
* ಖಾಸಗಿ ವಾಹನ ಸಂಚಾರ
* ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್
* ಮೆಟ್ರೋ, ಆಟೋ, ಟ್ಯಾಕ್ಸಿ
* ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ
* ಮಾರುಕಟ್ಟೆಗಳು

ಏನಿರುತ್ತೆ..?
* ಆಸ್ಪತ್ರೆ, ಮೆಡಿಕಲ್
* ನ್ಯಾಯಬೆಲೆ ಅಂಗಡಿ
* ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ)
* ಹಣ್ಣು-ತರಕಾರಿ (ಬೆಳಗ್ಗೆ 10ಗಂಟೆವರೆಗೆ)
* ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ (ಸಂಜೆ 6 ಗಂಟೆಯವರೆಗೆ)
* ದಿನಸಿ-ಮಾಂಸ (ಬೆಳಗ್ಗೆ 10 ಗಂಟೆವರೆಗೆ)
* ಹೋಟೆಲ್ ಪಾರ್ಸೆಲ್ (ಇಡೀ ದಿನ )
* ಮದ್ಯ ಪಾರ್ಸೆಲ್ (ಬೆಳಗ್ಗೆ 10ಗಂಟೆವರೆಗೆ)
* ಹಾಪ್‍ಕಾಮ್ಸ್ (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ)
* ಮನೆಯಲ್ಲಿ ಮಾತ್ರ ಮದುವೆ (40 ಜನರಿಗಷ್ಟೇ ಅವಕಾಶ)
* ಅಂತ್ಯಸಂಸ್ಕಾರ (5 ಜನರಿಗಷ್ಟೇ ಅವಕಾಶ)
* ಆಹಾರ ಸಂಸ್ಕರಣಾ ಘಟಕ
* ಹೋಂ ಡೆಲಿವರಿ
* ರೈಲು, ವಿಮಾನ

ಇನ್ನು ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಹೋಗುವಂಗಿಲ್ಲ, ಬದಲಾಗಿ ನಡೆದುಕೊಂಡೇ ಹೋಗಬೇಕು. ಏನೇ ಖರೀದಿಗೂ ನಡೆದುಕೊಂಡೇ ಹೋಗಬೇಕು. ತರಕಾರಿ, ದಿನಸಿ ಖರೀದಿಗೂ ನಡೆದುಕೊಂಡೇ ಹೋಗಬೇಕು. ಅಲ್ಲದೆ ಏರಿಯಾ ಬಿಟ್ಟು ಏರಿಯಾಕ್ಕೆ ಹೋದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಒಂದೇ ಒಂದು ವಾಹನ ರಸ್ತೆಯಲ್ಲಿ ಓಡಾಡುವಂತಿಲ್ಲ. ಆಟೋ, ಬೈಕ್, ಕಾರು ರಸ್ತೆಗೆ ಇಳಿಯುವಂತಿಲ್ಲ. ಒಂದು ವೇಳೆ ವಾಹನಗಳನ್ನು ರೋಡಿಗಿಳಿಸಿದ್ರೆ ಸೀಜ್ ಆಗೋದು ಪಕ್ಕಾ.

Comments

Leave a Reply

Your email address will not be published. Required fields are marked *