-7 ಲಕ್ಷದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಬೆಂಗಳೂರು: ರಾಜ್ಯದಲ್ಲಿಂದು 10,512 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 102 ಸೋಂಕಿತರು ಇಂದು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,00,786ಕ್ಕೆ ಏರಿಕೆಯಾಗಿದ್ದು, 1,20,929 ಸಕ್ರಿಯ ಪ್ರಕರಣಗಳಿವೆ. ಇಂದು ರಾಜ್ಯದಲ್ಲಿ 8,337 ಮಂದಿಗೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 892 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 9,891ಜಕ್ಕೆ ಏರಿಕೆಯಾಗಿದೆ. ಇಂದು ಸಹ ರಾಜ್ಯದಲ್ಲಿ 1.12,770 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜಧಾನಿ ಬೆಂಗಳೂರಿನಲ್ಲಿಂದು 4,563 ಪ್ರಕರಣಗಳು ವರದಿಯಾಗಿದ್ದು, 30 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 124, ಬಳ್ಳಾರಿ 225, ಬೆಳಗಾವಿ 515, ಬೆಂಗಳೂರು ಗ್ರಾಮಾಂತರ 224, ಬೆಂಗಳೂರು ನಗರ 4,563, ಬೀದರ್ 23, ಚಾಮರಾಜನಗರ 79, ಚಿಕ್ಕಬಳ್ಳಾಪುರ 122, ಚಿಕ್ಕಮಗಳೂರು 241, ಚಿತ್ರದುರ್ಗ 447, ದಕ್ಷಿಣ ಕನ್ನಡ 316, ದಾವಣಗೆರೆ 345, ಧಾರವಾಡ 141, ಗದಗ 32, ಹಾಸನ 455, ಹಾವೇರಿ 51, ಕಲಬುರಗಿ 104, ಕೊಡಗು 216, ಕೋಲಾರ 174, ಕೊಪ್ಪಳ 84, ಮಂಡ್ಯ 248, ಮೈಸೂರು 465, ರಾಯಚೂರು 93, ರಾಮನಗರ 68, ಶಿವಮೊಗ್ಗ 259, ತುಮಕೂರು 374, ಉಡುಪಿ 237, ಉತ್ತರ ಕನ್ನಡ 89, ವಿಜಯಪುರ 130 ಮತ್ತು ಯಾದಗಿರಿಯಲ್ಲಿ 73 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 10/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/NbEpCLlZGd pic.twitter.com/f1gsGcwU1s
— Karnataka Health Department (@DHFWKA) October 10, 2020

Leave a Reply