ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

– ಬಿಎಸ್‍ವೈ ನಿರ್ಗಮನದ ಬಳಿಕ ಹೊಸ ಮುಖಗಳಿಗೆ ಮಣೆ..!

ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ತೆರೆಯ ಹಿಂದೆ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸುತ್ತಿದ್ದು, ಬಿಎಸ್‍ವೈ ರಾಜೀನಾಮೆಯ ಬೆನ್ನಲ್ಲೆ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಇದು ಕೆಲವರಿಗೆ ಖುಷಿ, ಹಲವರಿಗೆ ಹೈಕಮಾಂಡ್ ಶಾಕ್ ನೀಡುವ ಸಾಧ್ಯತೆ ಇದೆ.

ಬಿಎಸ್‍ವೈಗೆ ಮಾತ್ರವಲ್ಲ ಸಚಿವರಿಗೂ ಶಾಕ್ ಕಾದಿದೆ ಎನ್ನಲಾಗಿದೆ. ಹಲವು ಸಚಿವರಿಗೆ ಕಾದಿದೆ ತಲೆತಂಡದ ಭೀತಿ ಎದುರಾಗಿದ್ದು, ‘ಮಿಷನ್ ಕ್ಲೀನ್’ ಲೆಕ್ಕಾಚಾರದಲ್ಲಿ ವರಿಷ್ಠರು ತಯಾರಿ ನಡೆಸಿದ್ದಾರೆ. ಬಿಎಸ್‍ವೈ ಜೊತೆ ಜೊತೆಗೆ ಕೆಲವು ಹಿರಿಯ ನಾಯಕರಿಗೆ ಕೊಕ್ ಸಾಧ್ಯತೆ ಇದ್ದು, ಸರ್ಕಾರದಿಂದ ಸಂಘಟನೆಗೆ ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಸೀಕ್ರೆಟ್ ಟೀಂ ಈಗಾಗಲೇ ಪಟ್ಟಿಯನ್ನೂ ಸಿದ್ಧ ಪಡಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

ಬಿಜೆಪಿಯಿಂದ ಹೊಸ ಟೀಂ..?
ವಿಧಾನಸಭೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ‘ಯಂಗ್ ಟೀಂ’ ಕಟ್ಟಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿಕೊಂಡಿದೆ. ಬಿಎಸ್‍ವೈ ನಿರ್ಗಮನದ ಬೆನ್ನಲ್ಲೇ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಹಿರಿಯ ನಾಯಕರಿಗೆ ಸಂಘಟನೆ ಜವಾಬ್ದಾರಿ ನೀಡಿ 2ನೇ ಹಂತದ ನಾಯಕತ್ವಕ್ಕೆ ಸರ್ಕಾರದಲ್ಲಿ ಆದ್ಯತೆ ಸಿಗಲಿದೆ. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?

ಈಗಾಗಲೇ ಹಲವು ಯುವ ಶಾಸಕರ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಹೈಕಮಾಂಡ್ ತಂಡ ಜಾತಿ ಪ್ರಾದೇಶಿಕತೆವಾರು ಮಾಹಿತಿ ಸಂಗ್ರಹ ಮಾಡಿದೆ. ಯುವ ನಾಯಕರ ರಿಪೋರ್ಟ್ ಕಾರ್ಡ್ ಕುಡ ಈಗಾಗಲೇ ಹೈಕಮಾಂಡ್ ಅಂಗಳ ತಲುಪಿದೆ. ಹೊಸ ಟೀಂನಲ್ಲಿ ಡಜನ್‍ಗೂ ಹೆಚ್ಚು ಯುವ ನಾಯಕರಿಗೆ ಅವಕಾಶ ನೀಡುವ ಮೂಲಕ ಹೊಸ ಟೀಂನೊಂದಿಗೆ ಚುನಾವಣೆ ಎದುರಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

Comments

Leave a Reply

Your email address will not be published. Required fields are marked *