ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವುದು ಸೂಕ್ತ – ಎಚ್‌ಡಿಕೆ

ಬೆಂಗಳೂರು: ಕರ್ನಾಟಕದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡುವುದು ಸೂಕ್ತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ರಾಜ್ಯದ ಕೊರೊನಾ ಗ್ರಾಫ್‌ ಏರಿಕೆ ಆಗುತ್ತಿದೆ. ಮೊದಲು 200, 300 ಬರುತ್ತಿದ್ದ ಕೇಸ್‌ಗಳ ಸಂಖ್ಯೆ ಈಗ ಸಾವಿರದ ಹತ್ತಿರಕ್ಕೆ ಬಂದಿದೆ. ಹೀಗಾಗಿ ಲಾಕ್ ಡೌನ್ ಮಾಡುವ ಪರಿಸ್ಥತಿ ಬಂದರೂ ಬರಬಹುದು ಜನ ಹುಷಾರಾಗಿರಬೇಕು ಎಂದರು.

ನಾನು ಪ್ರತಿ ದಿನ 600 ಕಿ.ಮೀ ಸಂಚರರಿಸುತ್ತಿದ್ದೇನೆ. ಹೋದ ಎಲ್ಲ ಕಡೆ ಜನ ಮುತ್ತಿಕೊಳ್ಳುತ್ತಾರೆ. 50ಕ್ಕೂ ಹೆಚ್ಚು ಜನ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಈ ವೇಳೆ ಅವರು ನನ್ನ ಬಳಿಯೇ ಬರುತ್ತಾರೆ. ಹೀಗಾಗಿ ನಾನು ಜನರಲ್ಲಿ ಮಾಸ್ಕ್‌ ಧರಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ನಾನು ದೇವರ ಮೇಲೆ ಭಾರ ಹಾಕಿ ಓಡಾಡುತ್ತಿದ್ದೇನೆ. ದೇವರ ದಯ ಸದ್ಯ ನಾವು ಉಳಿದುಕೊಂಡಿದ್ದೇವೆ. ಸೋಂಕು ಸಂಪೂರ್ಣ ಹೋಗಬೇಕು. ನಾವು ಜಾಗೃತರಾಗಿರಬೇಕು. ಹೀಗಾಗಿ ಎಲ್ಲರೂ ಮಾಸ್ಕ್‌ ಧರಿಸಿ ಎಂದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *