ರಾಜ್ಯದಲ್ಲಿ ಮೊದಲ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲೈವ್ ಆಪರೇಷನ್

– ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

ಚಾಮರಾಜನಗರ: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲೈವ್ ಆಪರೇಷನ್ ಕಾರ್ಯಾಗಾರ ನಡೆದಿದೆ. ಈ ಆಪರೇಷನ್ ಅನ್ನೋ ರಾಜ್ಯ, ರಾಷ್ಟ್ರದ ಜನರಷ್ಟೇ ಅಲ್ಲ ವಿದೇಶಿಗರು ಕೂಡ ವೀಕ್ಷಿಸಿದ್ದಾರೆ. ಹೊಟ್ಟೆ ಕೊಯ್ಯದೇ ಯೋನಿಯ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಈ ವೈದ್ಯರ ತಂಡ ಮಾದರಿಯಾಗಿದೆ.

ವೈದ್ಯೋ ನಾರಾಯಣ ಹರಿ ಅಂತಾರೆ. ಈ ಮಾತಿಗೆ ತಕ್ಕಂತೆ ಕೆಲಸವನ್ನು ಗಡಿ ಜಿಲ್ಲೆ ಚಾಮರಾಜನಗರದ ಸರ್ಕಾರಿ ವೈದ್ಯರ ತಂಡವೊಂದು ಶಹಬ್ಬಾಶ್ ಗಿರಿ ಪಡೆದಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮೊದಲ ಬಾರಿಗೆ ಲೈವ್ ಆಪರೇಷನ್ ಕಾರ್ಯಾಗಾರ ನಡೆಸಿ ಇದೀಗ ಸುದ್ದಿಯಲ್ಲಿದ್ದಾರೆ.

ಬೆಂಗಳೂರಿನ ಪ್ರಸೂತಿ ತಜ್ಞ ಚಂದ್ರಶೇಖರ್ ಮೂರ್ತಿ ನೇತೃತ್ವದಲ್ಲಿ ಆರೋಗ್ಯ ಕೇಂದ್ರದ 10 ಜನರ ವೈದ್ಯರ ತಂಡ 6 ಜನ ಮಹಿಳೆಯರಿಗೆ ಯಶಸ್ವಿ ಆಪರೇಷನ್ ನಡೆಸಿದೆ. ವಾಲ್ಟ್ ಪ್ರಲಾಕ್ಸ್, ವಿವಿಎಫ್ ರಿಪೇರಿ ಆಪರೇಷನ್, ಪಿಯೋ ವೆಜಾನಲ್ ಸ್ಲಿಂಗ್, ನಾನ್ ಡಿಸೆಂಟ್ ವೆಜಾಯನಲ್ ಇಸ್ಟಕ್ ಅಕ್ಟಮಿ, ಪಾಸ್ಪಟಿಕ್ ಲೆಬಿಯೋ ಪ್ಲಾಸ್ಟಿ ಅಂತ ಆಪರೇಷನ್ ನಡೆಸಿದೆ. ಇದೆಲ್ಲಾ ಗರ್ಭಕೋಶ ಸಂಬಂಧಿತ ಆಪರೇಷನ್ ಗಳಾಗಿದ್ದು, ಇಂತಹ ಆಪರೇಷನ್ ಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರಿಗೆ ಒಂದೂವರೆಯಿಂದ ಎರಡು ಲಕ್ಷ ಖರ್ಚಾಗುತ್ತೆ. ಆದರೆ ಬಡವರ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡ್ತಿದ್ದೇವೆ. ಇಂತಹ ಆಪರೇಷನ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಶಾ ಕಾರ್ಯಕರ್ತರ ಮೂಲಕ ತಿಳುವಳಿಕೆ ಮೂಡಿಸಿದ ನಂತರ 15 ಮಹಿಳೆಯರು ಆಪರೇಷನ್ ಗೆ ಮುಂದೆ ಬಂದಿದ್ದಾರೆ. ಇದೀಗ 6ಕ್ಕೂ ಹೆಚ್ಚು ಜನರಿಗೆ ಯೋನಿ ಮೂಲಕ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಮದು ವೈದ್ಯರು ಹೇಳಿದ್ದಾರೆ.

ಈ ಆಪರೇಷನ್ ನಿಂದ ಖಾಸಗೀ ವೈದ್ಯರಿಗೆ ನಿಜವಾಗ್ಲೂ ಶಾಕ್ ಆಗಿದೆ. ಯಾಕೆಂದರೆ ಇನ್ಮುಂದೆ ಶಸ್ತ್ರಚಿಕಿತ್ಸೆ ಅವಶ್ಯಕತೆಯುಳ್ಳ ಮಹಿಳೆಯರು ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಬಹುದಾಗಿದೆ. ಲಕ್ಷಾಂತರ ರೂ. ಖರ್ಚು ಮಾಡುವ ಪ್ರಮೇಯವೇ ಬರಲ್ಲ. ಗರ್ಭಕೋಶದಲ್ಲಿ ಮೂತ್ರ ಸೇರಿದಂತೆ ಹಲವು ಸಮಸ್ಯೆಗಳಿದ್ದವು. ಇದೀಗ ನಾವು ಆಪರೇಷನ್ ಮಾಡಿಸಿಕೊಂಡಿದ್ದು ಆರಾಮವಾಗಿದ್ದೇವೆ. ನಮಗೆ ಆಪರೇಷನ್ ನಡೆಸಿದ ತಂಡಕ್ಕೆ ಆಪರೇಷನ್ ಮಾಡಿಸಿಕೊಂಡ ಮಹಿಳೆಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವವರು ಕೂಡ ಸರ್ಕಾರಿ ಆಸ್ಪತ್ರೆಯತ್ತ ಕಣ್ಣರಳಿಸಿ ನೋಡುವ ಕೆಲಸ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದ್ದು, ಮತ್ತಷ್ಟು ಪ್ರಯೋಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿ ಅನ್ನೋದೆ ಎಲ್ಲರ ಆಶಯವಾಗಿದೆ.

Comments

Leave a Reply

Your email address will not be published. Required fields are marked *