ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ 3,629ಕ್ಕೆ ಏರಿಕೆ- 334 ಬಲಿ

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಹಾವಳಿ ದಿನೇದಿನೇ ಜಾಸ್ತಿ ಆಗ್ತಾ ಇದೆ. ಕೊರೊನಾ ಕೇಸ್ ಕಡಿಮೆಯಾಗುತ್ತಿದ್ದಂತೆ ಬ್ಲ್ಯಾಕ್ ಫಂಗಸ್ ಕೇಸ್ ಏರಿಕೆಯಾಗ್ತಾ ಇದೆ. ರಾಜ್ಯದ 30 ಜಿಲ್ಲೆಗಳಲ್ಲೂ ಒಟ್ಟು 3,629 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದ್ದು, ರಾಜ್ಯಾದ್ಯಂತ 334 ಜನ ಬಲಿಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬ್ಲ್ಯಾಕ್ ಹಾವಳಿ ಜೋರಿದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ 1157 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ ಬ್ಲ್ಯಾಕ್ ಫಂಗಸ್ ಗೆ ಬೆಂಗಳೂರಿನಲ್ಲಿ 110ಜನ ಸಾವನ್ನಪ್ಪಿದ್ದಾರೆ. ದಿನೇ ದಿನೇ ಕೇಸ್ ಏರಿಕೆಯಾಗ್ತಾ ಇದ್ದು ಆತಂಕ ಹುಟ್ಟಿಸಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ಅತೀ ಹೆಚ್ಚು ಬ್ಲ್ಯಾಕ್ ಫಂಗಸ್ ಇರುವುದು ಬೆಂಗಳೂರು ನಗರದಲ್ಲಿ. ಬೆಂಗಳೂರಿನಲ್ಲಿ ಇದುವರೆಗೂ 1157 ಕೇಸ್ ದಾಖಲಾಗಿದ್ದು ಅದರಲ್ಲಿ 824 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ಟೋರಿಯಾದಲ್ಲಿ 108 ಕೇಸ್, ಬೌರಿಂಗ್ ಆಸ್ಪತ್ರೆ 388 ಕೇಸ್, ಕೆಸಿ ಜನರಲ್ 04 ಕೇಸ್, ಇಂದಿರಾಗಾಂಧಿ 3 ಕೇಸ್ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೇಸ್ ಏರಿಕೆಯಾಗ್ತಾನೆ ಇದೆ.

Comments

Leave a Reply

Your email address will not be published. Required fields are marked *