ರಾಜ್ಯದಲ್ಲಿ ಕೊರೊನಾ ಟೆಸ್ಟ್ ಹೆಚ್ಚಳಕ್ಕೆ ನಿರ್ಧಾರ- ನಿತ್ಯ 25 ಸಾವಿರ ಟೆಸ್ಟ್‌ಗೆ ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಪತ್ತೆಯಾಗುವುದು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ವೈದ್ಯಕೀಯ ಸಚಿವ ಸುಧಾಕರ್ ಅವರು ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಡೆಲಿವರಿ ಬಾಯ್ಸ್, ರೈಲ್ವೇ ನಿಲ್ದಾಣದ ಕೂಲಿಗಳು, ಬೀದಿ ಬದಿಯ ವ್ಯಾಪಾರಿಗಳು, ಪೌರ ಕಾರ್ಮಿಕರು ಹಾಗೂ ಸ್ಲಂ ನಿವಾಸಿಗಳು ಸೇರಿದಂತೆ ಜನಸಂದಣಿ ಇರೋ ಕಡೆ ಹೆಚ್ಚು ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ಕೊರೊನಾ ರೋಗಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಬೇಕು. ಇದಕ್ಕಾಗಿ ಪ್ರತ್ಯೇಕ ಕೊಠಡಿ ಪ್ರತಿ ಆಸ್ಪತ್ರೆಯಲ್ಲಿ ಮೀಸಲಿಡಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ.

ರೋಗದ ಲಕ್ಷಣ ಇಲ್ಲದವರಿಗೆ ಆಯಾ ಸೆಂಟರ್(ಕೋವಿಡ್ ಕೇರ್ ಸೆಂಟರ್) ನಲ್ಲಿ ಚಿಕಿತ್ಸೆ ನೀಡಲು ತೀರ್ಮಾನ ಮಾಡಲಾಗಿದೆ. ಸ್ಟೇಡಿಯಂ, ಸಮುದಾಯ ಭವನಗಳು, ಮೆಡಿಕಲ್ ಕಾಲೇಜುಗಳನ್ನ ಆಯಾ ಸೆಂಟರ್ ಗಳಾಗಿ ಪರಿವರ್ತನೆ ಮಾಡುವುದು ಹಾಗೂ 20 ಸಾವಿರ ಬೆಡ್ ಸಿದ್ಧತೆಗೆ ಸೂಚನೆ ನೀಡಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಕೊಡುವ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು. ಈ ಬಗ್ಗೆ ಮಾರ್ಗಸೂಚಿ ರೆಡಿ ಆಗ್ತಿದೆ. ನಾಡಿದ್ದು ಟಾಸ್ಕ್ ಫೋರ್ಸ್ ಕಮಿಟಿ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಿ ನಿಗದಿ ಮಾಡಲಾಗುತ್ತದೆ.

ತಜ್ಞರ ಸಮಿತಿ ರಚನೆ, ಆಸ್ಪತ್ರೆಗಲ್ಲಿ ವೆಂಟಿಲೇಟರ್, ವಾರ್ಡ್ ಲಭ್ಯತೆ ಸೇರಿದಂತೆ ಇತರ ಸಿದ್ಧತೆ ಬಗ್ಗೆ ಕ್ರಮ, ಯಾವ ರೋಗಿಗೆ ಎಲ್ಲಿ ಚಿಕಿತ್ಸೆ ಕೊಡಬೇಕು ಅಂತ ಈ ಕಮಿಟಿ ವರದಿ ಕೊಡುತ್ತದೆ. ವಿಷಮ ಶೀತ ಜ್ವರ ಕೇಸ್(50 ವರ್ಷ ಮೇಲ್ಪಟ್ಟವರಿಗೆ) ಕಡ್ಡಾಯ ಟೆಸ್ಟ್ ಮಾಡಬೇಕು. ಉಸಿರಾಟದ ಕೇಸ್ ಶೇ.100 ಟೆಸ್ಟ್ ಆಗಬೇಕು. ಉಳಿದ ವರ್ಗದ ಜನರಿಗೆ ಲಕ್ಷಣಗಳ ಅನುಗುಣವಾಗಿ ಟೆಸ್ಟ್ ಮಾಡುವ ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *