– ಇಂದು 3,793 ಮಂದಿ ಆಸ್ಪತ್ರೆಯಿಂದ ಬಿಡುಗಡೆ
– ಬೆಂಗ್ಳೂರಲ್ಲಿ 2,233 ಜನರಿಗೆ ಕೋವಿಡ್ 19 ದೃಢ
ಬೆಂಗಳೂರು: ಕಳೆದ 7 ದಿನಗಳಿಂದ 5 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಇಂದು 6 ಸಾವಿರಕ್ಕೆ ಏರಿದೆ. ರಾಜ್ಯದಲ್ಲಿ ಇಂದು 6,128 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 118632ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ಇಂದು 83 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 2,230 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ರಾಜ್ಯದಲ್ಲಿ 3, 793 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 118632 ಸೋಂಕಿತರ ಪೈಕಿ 69, 700 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 46,694 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 620 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 20488 ರ‍್ಯಾಪಿಡ್ ಟೆಸ್ಟ್ ನಲ್ಲಿ 17, 607 ಆರ್‍ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 38,095 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 1,25,091 ಮಂದಿಗೆ ರ‍್ಯಾಪಿಡ್ ಟೆಸ್ಟ್, 11,88,765 ಮಂದಿಗೆ ಆರ್‍ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 13,13,856 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 2,233 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,324ಕ್ಕೆ ಏರಿಕೆ ಆಗಿದೆ. ಬೆಂಗಳೂರು ನಗರ 2,233, ಮೈಸೂರು 430, ಬಳ್ಳಾರಿ 343, ಉಡುಪಿ 248, ಬೆಂಗಳೂರು ಗ್ರಾಮಾಂತರ 224, ಕಲಬುರಗಿ 220, ಬೆಳಗಾವಿ 202 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಒಟ್ಟು 7 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇಂದಿನ 30/07/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/ob62xiLNLv pic.twitter.com/qGT3cBjl6o
— Karnataka Health Department (@DHFWKA) July 30, 2020
ಬೆಂಗಳೂರು ನಗರ 1,912, ಬಳ್ಳಾರಿ 337, ರಾಯಚೂರು 191, ಚಿಕ್ಕಬಳ್ಳಾಪುರ 176, ಧಾರವಾಡ 152, ಕಲಬುರಗಿ 124, ದಕ್ಷಿಣ ಕನ್ನಡ 105, ಕೋಲಾರ 90, ದಾವಣಗೆರೆ 85, ಮೈಸೂರು 70, ಉಡುಪಿ 61, ತುಮಕೂರು 60, ಬಾಗಲಕೋಟೆ 55, ಮಂಡ್ಯ 50, ಉತ್ತರ ಕನ್ನಡ 50, ಬೆಳಗಾವಿ 50, ಬೀದರ್ 44, ಚಿಕ್ಕಮಗಳೂರು 30, ವಿಜಯಪುರ 30, ಚಾಮರಾಜನಗರ 30, ಯಾದಗಿರಿ 23, ಹಾಸನ 21, ಗದಗ 19, ಹಾವೇರಿ 18 ಹಾಗೂ ಕೊಪ್ಪಳ 10 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್19 ಮಾಹಿತಿ: 30ನೇ ಜುಲೈ 2020
ಒಟ್ಟು ಪ್ರಕರಣಗಳು: 1,18,632
ಮೃತಪಟ್ಟವರು: 2,230
ಗುಣಮುಖರಾದವರು: 46,694
ಹೊಸ ಪ್ರಕರಣಗಳು: 6,128
ಇಂದು ನಡೆಸಲಾದ ಪರೀಕ್ಷೆಗಳು: 38,095#KarnatakaFightsCorona#Covid19Karnataka@BSYBJP pic.twitter.com/06Kjr2Pxuj— DIPR Karnataka (@KarnatakaVarthe) July 30, 2020

Leave a Reply