ರಾಜಕಾರಣಿಗಳಿಗೆ ಜನ ಲಜ್ಜೆ, ಮನಲಜ್ಜೆ ಎರಡೂ ಇರಬೇಕು: ಸಿ.ಟಿ ರವಿ

– ಪರಿಶುದ್ಧ ರಾಜಕಾರಣದ ಬಗ್ಗೆ ನಾವು ಆಲೋಚಿಸಬೇಕು

ಚಿಕ್ಕಮಗಳೂರು: ರಾಜಕಾರಣಿಗಳಿಗೆ ಜನ ಲಜ್ಜೆ ಹಾಗೂ ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳೋದು ಮನಲಜ್ಜೆ, ಜನರಿಗೆ ಹೆದರೋದು ಮನಲಜ್ಜೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ತನ್ನ ಹೆಸರನ್ನ ಯಾಕೆ ತಳುಕು ಹಾಕುತ್ತಿದ್ದಾರೆ ಗೊತ್ತಾಗ್ತಿಲ್ಲ. ತನಿಖೆಯಾಗಲಿ ಆಗ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತೆ. ಸಿಡಿ ಕೇಸ್ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ ಎಂದು ಅವರು ತಿಳಿಸಿದರು.

ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು. ಈಗ ಸಿಡಿ ಆಧಾರಿತ ರಾಜಕಾಕೀಯದ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತವೋ… ಸಿಡಿ ಆಧಾರಿತ ರಾಜಕಾರಣ ಬೇಕೋ, ಎಲ್ಲರೂ ಯೋಚಿಸಬೇಕು. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು ಎಂದರು.

ಅಣ್ಣಾಮಲೈ ತಮಿಳುನಾಡಿಗೆ ಒಳ್ಳೆ ನಾಯಕತ್ವ ನೀಡುತ್ತಾರೆ. 234 ಸ್ಥಾನದಲ್ಲಿ 20 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದೆ. ಎಐಡಿಎಂಕೆ ನೇತೃತ್ವದ ಎನ್.ಡಿ.ಎ. ಅಧಿಕಾರಕ್ಕೆ ಬರುತ್ತೆ. ಬಿಜೆಪಿ 10 ಸ್ಥಾನ ದಾಟಿ ಗೆಲುವು ಸಾಧಿಸುತ್ತೆ. ಅಣ್ಣಾಮಲೈಗೆ ಭಾರೀ ಜನಬೆಂಬಲ ವ್ಯಕ್ತವಾಗ್ತಿದೆ, ಅವ್ರು ಗೆಲ್ಲುತ್ತಾರೆ. ಸ್ಟಾಲಿನ್‍ಗೆ ಕರುಣಾನಿಧಿ ಮಗ ಅನ್ನೋದೆ ಪ್ಲಸ್ ಪಾಯಿಂಟ್ ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *