ರಾಗಿಣಿ ಜೊತೆ ಜೈಲು ಹಕ್ಕಿಯಾದ ಸಂಜನಾ – ಇನ್ನೆರಡು ದಿನ ಸೆರೆವಾಸ

ಬೆಂಗಳೂರು: ಚಂದನವನದ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಸೇರುತ್ತಿದ್ದಂತೆ ಮೌನಕ್ಕೆ ಜಾರಿದ್ದಾರೆ. ಜೈಲು ಸೇರಿದ ಬಳಿಕ ಯಾರ ಜೊತೆಯೂ ಮಾತನಾಡದೇ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಜೈಲು ಪ್ರವೇಶಿಸುವ ವೇಳೆಯೂ ಸಂಜನಾ, ಇಷ್ಟು ಚಿಕ್ಕ ದ್ವಾರದಲ್ಲಿ ನಾನು ಹೋಗಲ್ಲ ಅಂತ ಕಿರಿಕ್ ಮಾಡಿಕೊಂಡಿದ್ದರು. ಒಳ ಹೋಗುತ್ತಿದ್ದಂತೆ ವೈಲಂಟ್ ಆಗಿದ್ದ ಸಂಜನಾ ಸೈಲಂಟ್ ಆಗಿದ್ದಾರೆ. ಸೊಳ್ಳೆಗಳ ಹಿನ್ನೆಲೆ ಸಂಜನಾ ನಿದ್ದೆಯೂ ಮಾಡದೇ ತಾಯಿಯ ಆರೋಗ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ಸಂಜನಾ ಗಲ್ರಾನಿಗೆ ಜೈಲು ಅಧಿಕಾರಿಗಳು ನಂಬರ್ ನೀಡಿದ್ದಾರೆ. ಸಂಜನಾ ಅವರಿಗೆ ವಿಚಾರಣಾಧೀನ ಕೈದಿ ನಂ. 6,833, ವಿರೇನ್ ಖನ್ನಾಗೆ 6,834, ರಾಗಿಣಿ ಗೆಳೆಯ ರವಿಶಂಕರ್ ಗೆ 6,835 ನಂಬರ್ ನೀಡಲಾಗಿದೆ. ಸಂಜನಾಗೆ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆಯೇ ಇತ್ತ ಪರಪ್ಪನ ಅಗ್ರಹಾರದ ಮುಂದೆ ಫುಲ್ ಟೈಟ್ ಪೊಲೀಸ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಜೈಲು ಆವರಣದಿಂದ 500 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿತ್ತು. ಒಳಗಡೆ ಯಾರಿಗೂ ಪ್ರವೇಶ ನೀಡದೆ ಸಾರ್ವಜನಿಕರನ್ನೂ ಮುಖ್ಯ ರಸ್ತೆಯಲ್ಲೇ ತಡೆಯಲಾಗಿತ್ತು.

ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾ ಜೊತೆ ವೀರೇನ್ ಖನ್ನಾ, ರವಿಶಂಕರ್ ಅವರನ್ನು 1ನೇ ಎಸಿಎಂಎಂ ಕೋರ್ಟ್‍ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ವೀರೇನ್ ಖನ್ನಾ, ರವಿಶಂಕರ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರೆ ಸಂಜನಾಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಸಂಜನಾ ಪ್ರಕರಣವನ್ನು ವಿಶೇಷ ಕೋರ್ಟ್‍ಗೆ ವರ್ಗಾಯಿಸಿದ ಜೆಡ್ಜ್ ಸೆ.18ರಂದು ಕೋರ್ಟ್‍ಗೆ ಹಾಜರುಪಡಿಸಬೇಕೆಂದು ಸೂಚಿಸಿದರು.

Comments

Leave a Reply

Your email address will not be published. Required fields are marked *