ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ.

ಹೌದು..ಯಶ್ ಸಹೋದರಿ ನಂದಿನಿ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಅಲ್ಲದೇ ಯಶ್ ಮತ್ತೊಮ್ಮೆ ಮಾವ ಆಗಿದ್ದಾರೆ.

ಯಶ್ ಸಹೋದರಿ ನಂದಿನಿ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಎರಡನೇ ಮಗುವಿಗೆ ತಾಯಿಯಾಗಿದ್ದೀನಿ. ಎರಡನೇ ಮಗು ಕೂಡ ಗಂಡು ಮಗು” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುದ್ದಾದ ಮಗುವಿನ ಪಾದಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಯಶ್ ಸಹೋದರಿ ನಂದಿನಿ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿದ್ದು, ಇವರ ವಿವಾಹವಾಗಿ 8 ವರ್ಷ ಕಳೆದಿದೆ. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ. ಇತ್ತೀಚಿಗಷ್ಟೆ ಅಂದರೆ ಏಪ್ರಿಲ್ ತಿಂಗಳಲ್ಲಿ ನಂದಿನಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಯಶ್ ಮನೆಗೆ ಮತ್ತೊಂದು ಮಗು ಆಗಮಿಸಿದ್ದಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

https://www.instagram.com/p/CC3BDQdHvns/?utm_source=ig_embed

ನಟ ಯಶ್‍ಗೆ ಸಹೋದರಿ ಎಂದರೆ ತುಂಬಾ ಪ್ರೀತಿ. ನಂದಿನಿ ಅವರು ಕೂಡ ಪ್ರತಿವರ್ಷ ರಕ್ಷಾಬಂಧನ ದಿನ ಪ್ರೀತಿಯ ಅಣ್ಣನಿಗೆ ರಾಕಿ ಕಟ್ಟುತ್ತಾರೆ. ಆ ಫೋಟೋಗಳನ್ನು ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

ಈಗಾಗಲೇ ಯಶ್ ಮತ್ತು ರಾಧಿಕಾ ದಂಪತಿಗೆ 2018 ಡಿಸೆಂಬರ್‌ನಲ್ಲಿ ಐರಾ ಯಶ್ ಜನಿಸಿದ್ದಳು. ಒಂದು ವರ್ಷದೊಳಗೆ ಅಂದರೆ 2019 ಅಕ್ಟೋಬರ್‌ನಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯಕ್ಕೆ ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ರಾಕಿಂಗ್ ದಂಪತಿ ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *