ರಸ್ತೆಯಲ್ಲಿ ಹೋಗುತ್ತಿದ್ದಾಗ ಹೆಜ್ಜೇನು ಹಿಂಡು ದಾಳಿ- ಓರ್ವ ಸಾವು, ಹಲವರಿಗೆ ಗಾಯ

ಮಡಿಕೇರಿ: ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ್ದು, ಓರ್ವ ಮೃತಪಟ್ಟದ್ದಾನೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದಲ್ಲಿ ಘಟನೆ ನಡೆದಿದೆ. ನಾಪೋಕ್ಲುವಿನ ಕೊಡವ ಸಮಾಜ ರಸ್ತೆಯಲ್ಲಿ ಇಂದು ಸಂಜೆ ರಸ್ತೆಯಲ್ಲಿ ಸಾಗುತ್ತಿದ್ದವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ್ದು, ಕೂಲಿ ಕಾರ್ಮಿಕ ನಾಪೋಕ್ಲು ಸಮೀಪದ ಅಜ್ಜಿಮುಟ್ಟ ನಿವಾಸಿ ವೇಲಾಯುದನ್ ಸಾವನ್ನಪ್ಪಿದ್ದಾರೆ.

ಜೇನು ಹುಳುಗಳು ಕಚ್ಚಿದ್ದರಿಂದ ಅನೇಕರಿಗೆ ಗಾಯಗಳಾಗಿವೆ. ವೇಲಾಯುದನ್ ಮೇಲೆ ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಡವ ಸಮಾಜದ ಬಳಿ ಹೆಜ್ಜೇನು ದಂಡು ಎಲ್ಲಿಂದ ಬಂದವು ಎಂಬ ಬಗ್ಗೆ ನಾಗರಿಕರಲ್ಲಿ ಕುತೂಹಲ ಮೂಡಿದೆ. ಈ ರೀತಿ ಏಕಾಏಕಿ ಹೆಜ್ಜೇನು ಹಿಂಡು ದಾಳಿ ನಡೆಸಿ ಒಬ್ಬರ ಸಾವಿಗೆ ಕಾರಣವಾಗಿರುವುದು ನಾಪೋಕ್ಲು ಪೇಟೆಯಲ್ಲಿನ ಜನರ ಆತಂಕಕ್ಕೂ ಕಾರಣವಾಗಿದೆ. ಹೆಜ್ಜೇನು ದಾಳಿಗೆ ಒಳಗಾದವರಿಗೆ ನಾಪೋಕ್ಲು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *