ಯೋಚಿಸಿ ಮಾತನಾಡಿ – ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್

ವಾರದ ಪಂಚಾಯ್ತಿಯಲ್ಲಿ ಸುದೀಪ್ ಪ್ರಶಾಂತ್ ಸಂಬರಗಿ ಅವರಿಗೆ ತಿರುಗೇಟು ನೀಡಿದ್ದಾರೆ. ದಿವ್ಯಾ ಸುರೇಶ್ ಅವರ ವೈಯಕ್ತಿಕ ವಿಚಾರವನ್ನು ತೆಗೆದುಕೊಂಡು ಗೇಲಿ ಮಾಡಿರುವ ಕುರಿತಾಗಿ ಸುದೀಪ್ ವಾರದ ಕತೆ ಕಿಚ್ಚನ ಜೊತೆಯಲ್ಲಿ ಸಖತ್ ಖಾರವಾಗಿ ಉತ್ತರ ಕೊಟ್ಟಿದ್ದಾರೆ.

ಪ್ರಶಾಂತ್ ಅವರೇ, ನಿಮ್ಮ 45 ವರ್ಷದ ಈ ಜರ್ನಿಯಲ್ಲಿ ನಿಮಗೆ ನೀವು ಮಾಡಿರುವ ಯಾವುದಾದರೂ ಒಂದು ಕೆಲಸದ ಬಗ್ಗೆ ನಿಮಗೆ ಬೇಸರ, ಮುಜುಗರ ಅನ್ನಿಸಿದೆಯಾ..? ನಾನು ಹೀಗೆ ಮಾಡಬಾರದಿತ್ತು ಅಂತ ಸುದೀಪ್ ಕೇಳಿದ್ದಾರೆ. ಆಗ ಪ್ರಶಾಂತ್ ಇಲ್ಲ ಎಂದು ಮೊದಲು ಹೇಳಿದ್ದಾರೆ. ಆಗ ಸುದೀಪ್ ಮತ್ತೆ ಮತ್ತೆ ಕೇಳಿದ್ದಾರೆ. ನೀವು ಡಿಗ್ರಿ ಓದುತ್ತಿದ್ದಾಗ ಏನೂ ನಡೆದಿಲ್ಲವಾ ಎಂದು ಕೇಳಿದ್ದಾರೆ. ಆಗ ಪ್ರಶಾಂತ್ ನನಗೆ ನೆನಪಾಗುತ್ತಿಲ್ಲ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ಆಗ ಪ್ರಶಾಂತ್ ಹೌದು, ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಕೆಲವೊಮ್ಮೆ ಬೇಸರವಾಗಿದೆ ಎಂದು ಹೇಳಿದ್ದಾರೆ. ಆಗ ಸುದೀಪ್ ಹಾಗಾದ್ರೆ ನೀವು ದಿವ್ಯಾ ಸುರೇಶ್ ಅವರು ಮಾಡಿರುವ ಸಿನಿಮಾ ಹೆಸರು ತೆಗೆದುಕೊಂಡು ರ್ಯಾಗಿಂಗ್ ಮಾಡುತ್ತಿದ್ದೀರಾ ಯಾಕೆ? ಎಂದು ತುಂಬಾ ಸೂಕ್ಷ್ಮವಾಗಿ ಕೇಳಿದ್ದಾರೆ. ಆಗ ಇಲ್ಲ ಸರ್ ನಾನು ಒಂದು ದಿನ ಮಾಡಿದ್ದೇನೆ ಅಷ್ಟೇ ಎಂದು ಪ್ರಶಾಂತ್ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಆಗ ಸುದೀಪ್, ನಾನು ಸುದೀಪ್ ಪ್ರಶಾಂತ್ ಅವರೇ.. ಕಿಚ್ಚನಾ ಅಂತಾ ಎಂದು ಗರಂ ಆಗಿರುವ ವಿಚಾರವನ್ನು ಸಾಫ್ಟ್ ಆಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ನೀವು ನೋವು ಮಾಡುವ ಉದ್ದೇಶದಿಂದಲೇ ಮಾಡಿದಾಗ ನಾಟ್ ಓಕೆ, ಕೆಲವು ವಿಚಾರಗಳನ್ನು ಮಾತನಾಡುವಾಗ ಯೋಚಿಸಿ ಮಾತನಾಡಿ, ನಾನು ಕೂಡಾ ಸಿನಿಮಾ ಮಾಡಿದ್ದೇನೆ, ನಾನು ಗೆದ್ದಿದ್ದೇನೆ, ಸೋತಿದ್ದೇನೆ. ಒಂದೊಂದು ಪಾಠವನ್ನು ಕಲಿತ್ತಿದ್ದೇನೆ. ನಾನು 72 ದಿನದಲ್ಲಿ ಒಂದೇ ಒಂದು ನೆಗಿಟಿವ್ ಆಗಿ ಮಾತಾಡಿಲ್ಲ ದಿವ್ಯಾ ಸುರೇಶ್ ಅವರ ಬಗ್ಗೆ ಎಂದು ಆಗಾಗ ಹೇಳಿತ್ತೀರಾ. ನಾವು ಫ್ಯಾಕ್ಟ್ ಚೆಕ್ ಮಾಡಿದರೇ ಪ್ರಶಾಂತ್ ಅವರೇ ನೀವು ಶೃತಿ ತಪ್ಪುತ್ತಾ ಇದ್ದೀರಾ ನೀವು.. ಇನ್ಮೇಲೆ ನಿಮಗೆ ಬಿಟ್ಟಿದ್ದು, ನಾನು ಹೇಳುವುದನ್ನು ನೇರವಾಗಿ ಹೇಳಿದ್ದೇನೆ ಎಂದಿದ್ದಾರೆ.

ದಿವ್ಯಾ ಸುರೇಶ್, ನೀವೆಲ್ಲಾ ನನಗೆ ಒಂದೇ ಎಲ್ಲರೂ ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಂದಿದ್ದಾರೆ. ನಿಮಗೆ ನಿಮ್ಮದೇ ಐಡೆಂಟಿಗಳಿವೆ. ನಿಮ್ಮ ಸಿನಿಮಾ ನಿಮಗೆ ಹೆಮ್ಮೆ ಇರಲಿ ದಿವ್ಯಾ ಅವರೇ ನಿಮ್ಮ ಕುರಿತಾಗಿ ಮಾತನಾಡುವಾಗ ಕಣ್ಣೀರು ಹಾಕುತ್ತಾ ಇರುವುದಲ್ಲ ನಿಮಗೆ ಅನ್ನಿಸಿದ್ದನು ನೇರವಾಗಿ ಮಾತನಾಡಿ ದಿವ್ಯಾ ಎಂದು ಹೇಳುತ್ತಾ ಖಡಕ್ ಆಗಿರುವ ವಾರ್ನಿಂಗ್ ಅನ್ನು ಸುದೀಪ್ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ವಾರದ ಕತೆ ಕಿಚ್ಚನ ಜೊತೆಯ ವಾರಾಂತ್ಯ ಕಾರ್ಯಕ್ರಮ ಸಖತ್ ಖಾರ ಖಾರವಾಗಿದ್ದಂತೂ ಖಂಡಿತಾ ಹೌದು. ಸುದೀಪ್ ಹಿಂದಿನ ವಾರ ಸುಮ್ಮನೆ ಇದ್ದರು. ಆದರೆ ಈ ವಾರ ಸ್ಪರ್ಧಿಗಳ ತಪ್ಪನ್ನು ಒಂದೊಂದೇ ಆಗಿ ಹೇಳುತ್ತಾ ಅವರಿಗೆ ತಪ್ಪಿನ ಅರಿವನ್ನು ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *