ಯೆಲ್ಲೋ ಜೆರ್ಸಿಯಲ್ಲಿ ಕೊನೆಯ ಪಂದ್ಯವೇ?- ಎರಡೇ ಪದದಲ್ಲಿ ಉತ್ತರಿಸಿದ ಎಂಎಸ್‍ಡಿ

ಅಬುಧಾಬಿ: ಯೆಲ್ಲೋ ಜೆರ್ಸಿಯಲ್ಲಿ ಇದೇ ಕೊನೆಯ ಪಂದ್ಯವೇ ಎಂದು ಕೇಳಿದ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯವರು ಎರಡನೇ ಪದಗಳಲ್ಲಿ ಉತ್ತರ ನೀಡಿದ್ದಾರೆ.

ಇಂದು ಅಬುಧಾಬಿ ಮೈದಾನದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸಿಎಸ್‍ಕೆ ತಂಡ 9 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ತಾನು ಐಪಿಎಲ್-2020ಯಿಂದ ಹೊರ ಹೋಗಿದ್ದು, ತನ್ನ ಜೊತೆ ಪಂಜಾಬ್ ತಂಡವನ್ನು ಹೊರಗಡೆ ಕರೆದುಕೊಂಡಿದೆ.

ಇಂದಿನ ಪಂದ್ಯದ ಟಾಸ್ ವೇಳೆ ಧೋನಿಯವರನ್ನು ಮಾತನಾಡಿಸಿದ ಕಮೆಂಟೆಟರ್ ಮತ್ತು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡ್ಯಾನಿ ಮಾರಿಸನ್, ಯೆಲ್ಲೋ ಜೆರ್ಸಿಯಲ್ಲಿ ಈ ಪಂದ್ಯವೇ ಕೊನೆ ಪಂದ್ಯ ಆಗಲಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎರಡನೇ ಪದಗಳಲ್ಲಿ ಉತ್ತರಿಸಿರುವ ಧೋನಿ ಖಂಡಿತವಾಗಿಯೂ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್ ಅನ್ನು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಸುಳಿವು ನೀಡಿದ್ದಾರೆ.

ಕಳೆದ ಆಗಸ್ಟ್ 15ರಂದು ಎಂಎಸ್ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಧೋನಿಯವರು ಈ ಬಾರಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ಆಡುವ ಯೋಜನೆಯಲ್ಲಿದ್ದರು. ಆದರೆ ಕೊರೊನಾ ಕಾರಣದಿಂದ ವಿಶ್ವಕಪ್ ರದ್ದಾಗಿತ್ತು. ಇದಾದ ನಂತರ ಐಪಿಎಲ್ ಆರಂಭವಾಗಿತ್ತು. ಈ ಬಾರಿಯ ಐಪಿಎಲ್ ಧೋನಿಯವರ ಕಡೆ ಐಪಿಎಲ್ ಎಂದು ಹೇಳಲಾಗಿತ್ತು. ಆದರೆ ಧೋನಿ ಮತ್ತೆ ನಾನು ಆಡುತ್ತೇನೆ ಎಂಬ ಮಾತುಗಳನ್ನು ಆಡಿದ್ದಾರೆ.

ಇಂದು ಅಬುಧಾಬಿ ಮೈದಾನದಲ್ಲಿ ನಡೆದ 53ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದು ಮಧ್ಯಮ ಕ್ರಮಾಂಕದಲ್ಲಿ ಕುಸಿದಿತು. ಆದರೆ ಕೊನೆಯಲ್ಲಿ ದೀಪಕ್ ಹೂಡಾ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 154 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಡ್ ಅದ್ಭುತ ಜೊತೆಯಾಟದಿಂದ ಇನ್ನೂ 7 ಬಾಲು ಉಳಿದಂತೆ ಗೆದ್ದು ಬೀಗಿತು.

Comments

Leave a Reply

Your email address will not be published. Required fields are marked *