ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕವರ್‌ಗೆ ತುಂಬಿ ಎಸೆದ್ರು

– ಸೂಟ್‍ಕೇಸ್‍ನಲ್ಲಿದ್ದ ಯುವತಿಯ ಮಾಂಸ ತುಂಬಿದ ಪಾಲಿಥಿನ್ ಕವರ್‌ಗಳು

ಲಕ್ನೋ: ಯುವತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ಕತ್ತರಿಸಿ ಸೂಟ್‍ಕೇಸ್‍ನಲ್ಲಿ ತುಂಬಿ ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ನಗರದಲ್ಲಿ ನಡೆದಿದೆ.

ಅಪರಿಚಿತ ಯುವತಿಯನ್ನು ಕೊಲೆ ಮಾಡಿರುವ ಪಾಪಿಗಳು ಆಕೆಯನ್ನು ಮೃತದೇಹವನ್ನು ಬಿಡಿ ಬಿಡಿಯಾಗಿ ಕತ್ತರಿಸಿದ್ದಾರೆ. ನಂತರ ಅದನ್ನು ಪಾಲಿಥಿನ್ ಕವರ್ ಒಳಗೆ ತುಂಬಿ ನಂತರ ಸೂಟ್‍ಕೇಸ್‍ಗೆ ಅದನ್ನು ಹಾಕಿ, ಸಫೆದಾಬಾದ್ ಪ್ರದೇಶದಲ್ಲಿರುವ ಮುಚ್ಚಿದ ಹಳೇ ಕಾರ್ಖಾನೆ ಮುಂಭಾಗದಲ್ಲಿ ಎಸೆದು ಹೋಗಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಕಾರ್ಖಾನೆ ಮುಚ್ಚಿರುವ ಕಾರಣ ಈ ಜಾಗದಲ್ಲಿ ಯಾವ ಜನರು ಓಡಾಡುವುದಿಲ್ಲ. ಈ ಕಾರಣದಿಂದ ಈ ಸೂಟ್‍ಕೇಸ್ ಅನ್ನು ಯಾರೂ ಗಮನಿಸಿಲ್ಲ. ಆದರೆ ಎರಡು ಮೂರು ದಿನಗಳ ನಂತರ ಕೊಳೆತ ವಾಸನೆ ಬರಲಾರಂಭಿಸಿದೆ. ಆಗ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಹೋದ ಪೊಲೀಸರು ಸೂಟ್‍ಕೇಸ್ ವಶಕ್ಕೆ ಪಡೆದು, ಮೃತದೇಹವನ್ನು ಲ್ಯಾಬ್‍ಗೆ ಕಳುಹಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಎಸ್‍ಪಿ ಅರವಿಂದ ಚತುರ್ವೇದಿ, ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಸೂಟ್‍ಕೇಸಿನೊಳಗೆ ಇರುವ ಮೃತದೇಹದ ಭಾಗಗಳನ್ನು ನೋಡಿ ಇದು ಮಹಿಳೆಯ ಶವ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಸುಮಾರು 20 ವಯಸ್ಸಿನ ಯುವತಿಯ ಮೃತದೇಹ ಎಂದು ತಿಳಿದುಬಂದಿದೆ. ಯಾರೋ ಬೇರ ಕಡೆ ಕೊಲೆ ಮಾಡಿ ನಂತರ ಅದನ್ನು ಕತ್ತರಿಸಿ ಇಲ್ಲಿಗೆ ತಂದು ಎಸೆದಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *