ಯಾವುದೇ ಕಾರಣಕ್ಕೂ ಮಾವನ ಬಳಿ ಸೀಕ್ರೆಟ್ ಹೇಳ್ಬಾರ್ದು – ಲ್ಯಾಗ್ ಮಂಜು

ಬೆಂಗಳೂರು: ಬಿಗ್‍ಬಾಸ್ ಮನೆಯ 8ನೇ ಸೀಸನ್ ಮೊದಲ ವಾರದ ಕಥೆಯಲ್ಲಿ ಸುದೀಪ್ ಮನೆಯಲ್ಲಿರುವ ಸದಸ್ಯರ ಸರಿ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಸದಸ್ಯರನ್ನು ಮಾತನಾಡಿಸುವ ವೇಳೆ ಲ್ಯಾಗ್ ಮಂಜು ಅವರನ್ನು ಮಾತನಾಡಿಸಿದ್ದಾರೆ ಈ ವೇಳೆ ಕೆಲವು ಫನ್ನಿ ವಿಚಾರಗಳನ್ನು ಲ್ಯಾಗ್ ಮಂಜು ಹಂಚಿಕೊಂಡಿದ್ದಾರೆ.

ಸ್ನೇಹಿತರು ಸಿಕ್ಕತ್ತಾರೆ. ಗರ್ಲ್ ಫ್ರೆಂಡ್ಸ್ ಸಿಗತ್ತಾರೆ ಆದರೆ ಲ್ಯಾಗ್ ಮಂಜು ಅವರಿಗೆ ಮಾವ ಸಿಕ್ಕಿದ್ದಾರೆ ಎಂದು ಸುದೀಪ್ ಜೋಕ್ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಮಂಜು, ನಾನು ಮೊದಲ ದಿನ ಬಂದಾಗ ದೊಡ್ಡ ನಟಿಯರು ಸೆಲೆಬ್ರಿಟಿಗಳು ಅಂತಾ ಸುಮ್ಮನೆ ಇದ್ದೆ. ಆದರೆ ಇಷ್ಟು ಬೇಗ ಎಲ್ಲರೂ ಇಷ್ಟೊಂದು ಕ್ಲೋಸ್ ಆಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮಂಜು ಹೇಳಿದ್ದಾರೆ.

ಮಾವ ಸಿಕ್ಕಿರೊದು ತುಂಬಾ ಖುಷಿಯಾಗಿದೆ. ಮನೆ ಒಳಗೆ ಬಂದಾಗ ಸಂಬರ್ಗಿ.. ಸಂಬರ್ಗಿ ಎನ್ನುವ ಹೆಸರು ಕೇಳಿ ಬರುತ್ತಿತ್ತು. ಈ ಹೆಸರನ್ನು ಎಲ್ಲೋ ಕೇಳಿದ್ದೇನೆ ಎಂದು ನನಗೆ ಅನ್ನಿಸುತ್ತಿತ್ತು. ಆಮೇಲೆ ಇವರೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಶಾಕ್ ಕೊಟ್ಟ ವ್ಯಕ್ತಿ ಅನ್ನೋದು ಗೊತ್ತಾಯಿತು ಎಂದು ಹೇಳುತ್ತಾ ನಕ್ಕಿದ್ದಾರೆ.

ಮಾವನ ಹತ್ರ ಸೀಕ್ರೆಟ್ ಹೇಳ್ಬಾರ್ದು:
ಮಾವ ಏನು ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅವರ ಹತ್ರ ಏನದ್ರೂ ಸೀಕ್ರೆಟ್ ಹೇಳಿದರೆ ಎಲ್ಲರಿಗೂ ಹೇಳಿ ಬಿಡುತ್ತಾರೆ. ಅವರಿಗೆ ಸಿಕ್ರೆಟ್ ಹೇಳ್ಬಾರ್ದು ಎಂದು ಹೇಳಿ ತಮಾಷೆ ಮಾಡಿದ್ದಾರೆ. ಮನೆಯ ಸದಸ್ಯರೆಲ್ಲರ ಕುರಿತಾಗಿ ಹೇಳಿ ಎಂದು ಸುದೀಪ್ ಹೇಳಿದಾಗ ಮಂಜು ಮನೆಯ ಸದಸ್ಯರ ಕುರಿತಾಗಿ ಫನ್ನಿಯಾಗಿ ಕೆಲವಷ್ಟು ವಿಚಾರಗಳನ್ನು ಹೇಳಿದ್ದಾರೆ.

ಬಿಗ್‍ಬಾಸ್ ಮನೆಯ ಸದಸ್ಯರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಯಾರು ಹೋಗುತ್ತಾರೆ ಎನ್ನುವುದು ಇಂದು ತಿಳಿಯಲಿದೆ. ಮನೆಯಲ್ಲಿರುವವರು ಏನೇ ಆಟ ಆಡಿದ್ರು ಕೂಡಾ ಇವರನೆಲ್ಲ ಕೀ ಕೊಟ್ಟ ಗೊಂಬೆಗಳಂತೆ ಆಡಿಸುವವರು ಬಿಗ್ ಬಾಸ್. ಇವರೆಲ್ಲ ಸೂತ್ರದ ಗೊಂಬೆಗಳು ಎನ್ನುವುದು ಮಾತ್ರ ಅಷ್ಟೇ ಸತ್ಯವಾಗಿದೆ. ಮೊದಲ ವಾರ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *