ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ: ಕಮಲ್ ಪಂಥ್

ಬೆಂಗಳೂರು: ಯಾರಾದರೂ ಚೇಷ್ಟೆ ಮಾಡಿದರೆ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಸಿದ್ದಾರೆ.

ನಾಳೆಯಿಂದ ಸಾರಿಗೆ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ. ಯಾವ ಪ್ರತಿಭಟನೆ ಮಾಡುವಂತಿಲ್ಲ. ಪ್ರತಿಭಟನೆ ನಡೆಸಿದ್ರೆ ಬಂಧಿಸುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.

ಎಲ್ಲ ಬಂದೋಬಸ್ತ್ ಗೂ ನಾವು ತಯಾರಾಗಿದ್ದೀವಿ. ಯಾರಾದ್ರೂ ಚೇಷ್ಟೆ ಮಾಡಿದ್ರೆ ಅವರನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ ನಲ್ಲಿ ಭದ್ರತೆ ಕೊಡ್ತೀವಿ. ಡ್ಯೂಟಿಗೆ ಬರೋದು ಬಿಡೊದು ಅವರ ಡಿಪಾರ್ಟ್ಮೆಂಟ್ ಗೆ ಸಂಬಂಧಿಸಿದ್ದು ಎಂದು ಅವರು ತಿಳಿಸಿದ್ದಾರೆ.

ರಸ್ತೆಗಿಳಿದು ಕಲ್ಲು ತೂರಾಟ ರಸ್ತೆ ತಡೆ ಮಾಡಿದ್ರೆ ಅದಕ್ಕೆ ತಕ್ಕ ಶಾಸ್ತಿ ಮಾಡ್ತೀವಿ. 21 ನೇ ತಾರೀಕಿನವರೆಗೇ ಕೋವಿಡ್ ಪ್ರೋಟೋಕಾಲ್ ಇದೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಕಮಲ್ ಪಂಥ್ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *