ಯಾದಗಿರಿಯಲ್ಲಿ ವರಣುನ ಅಬ್ಬರ- ಮಲೆನಾಡಿನಂತಾದ ಬಿಸಿಲನಾಡು

– ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಯಾದಗಿರಿ ಮಂದಿ

ಯಾದಗಿರಿ: ತಡರಾತ್ರಿಯಿಂದ ಯಾದಗಿರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಹಳ್ಳ, ಕರೆಗಳು ತುಂಬುವ ಹಂತಕ್ಕೆ ತಲುಪಿವೆ. ಇದರ ನಡುವೆ ಜಿಟಿ ಜಿಟಿ ಮಳೆ ಶುರುವಾಗಿದ್ದು, ಭೂರಮೆಗೆ ಹಸಿರು ಸೀರೆಯನ್ನುಡಿಸಿದಂತಾಗಿದೆ. ಇದನ್ನು ಕಂಡ ಯಾದಗಿರಿ ಜನ ಪುಳಕಿತರಾಗುತ್ತಿದ್ದಾರೆ.

ಸೂರ್ಯನ ತವರಾಗಿದ್ದ ಯಾದಗಿರಿ, ಇಂದು ಅಕ್ಷರಶಃ ಮಲೆನಾಡಾಗಿದೆ. ಮಳೆ, ಮೋಡಗಳ ಜೊತೆಗೆ ಬೆರೆತಿರುವ ಯಾದಗಿರಿ ಕೋಟೆ ಅದ್ಭುತವಾಗಿ ಕಾಣುತ್ತಿದೆ. ಮುಂಗಾರು ಮಳೆ ನಾರಾಯಣಪುರ ಜಲಾಶಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದು, ಡ್ರೂನ್ ಕ್ಯಾಮರಾದಲ್ಲಿ ಜಲಾಶಯದ ಚೆಂದದ ಕ್ಷಣಗಳು ಕಣ್ಣಿಗೆ ಮುದ ನೀಡುತ್ತಿವೆ. ತಿಂಥಿಣಿ ಬ್ರಿಡ್ಜ್, ಕೃಷ್ಣಾ ನದಿ ಮಲೆನಾಡಿನ ಮಂಜಿನ ಅನುಭವ ನೀಡುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ

ಮತ್ತೊಂದು ಕಡೆ ಚಳಿಯ ಪ್ರಮಾಣವು ಜಾಸ್ತಿಯಾಗಿದ್ದು, ಇಷ್ಟು ದಿನ ಉರಿ ಬಿಸಿಲಿಗೆ ಬೆಂದ ಯಾದಗಿರಿ ಮಂದಿ, ಈಗ ಮಂದ ಮಳೆಗೆ ಮೂಕವಿಸ್ಮಿತರಾಗಿದ್ದಾರೆ. ಮಳೆಯಿಂದಾಗಿ ಫುಲ್ ಖುಷ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *