ಯಶ್ ಮುಂದಿನ ಚಿತ್ರವನ್ನು ನಿರ್ಮಿಸಲಿದೆ ಝೀ ಸಿನಿಮಾಸ್

ಬೆಂಗಳೂರು: ಕೆಜಿಎಫ್-2 ಬಳಿಕ ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಈ ಬಗ್ಗೆ ಸುಳಿವು ಸಿಕ್ಕಿದ್ದು, ಯಶ್ ಮುಂದಿನ ಸಿನಿಮಾವನ್ನು ಝೀ ಸಿನಿಮಾಸ್ ನಿರ್ಮಿಸಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನರ್ತನ್ ಅವರು ಈಗಾಗಲೇ ಯಶ್ ಅವರಿಗೆ ಒಂದು ಸಾಲಿನ ಕಥೆ ಹೇಳಿದ್ದಾರೆ. ಇದನ್ನು ಪೂರ್ತಿ ಮಾಡಿಕೊಂಡು ಬರುವಂತೆ ಯಶ್ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕೆಜಿಎಫ್-2 ಬಳಿಕ ಯಶ್ ಮುಂದಿನ ಸಿನಿಮಾವನ್ನು ನರ್ತನ್ ಅವರೇ ನಿರ್ದೇಶಿಸುತ್ತಿದ್ದಾರೆ ಎಂಬ ಬಗ್ಗೆ ತಿಳಿದಿತ್ತು. ಅದರೆ ಈ ಸಿನಿಮಾವನ್ನು ಯಾರು ನಿರ್ಮಿಸಲಿದ್ದಾರೆ ಎಂಬ ಕುತೂಹಲ ಇತ್ತು ಇದೀಗಕ್ಕೆ ಇದೀಗ ತೆರೆ ಬಿದ್ದಿದ್ದು, ಝೀ ಸಿನಿಮಾಸ್ ನಿರ್ದೇಶಿಸುತ್ತಿದೆ ಎನ್ನಲಾಗಿದೆ. ಆದರೆ ಸಿನಿಮಾದ ಹೆಸರು ಹಾಗೂ ಇತರೆ ಮಾಹಿತಿ ಲಭ್ಯವಾಗಿಲ್ಲ.

ಕನ್ನಡದಲ್ಲಿ ಸೆಟ್ಟೇರಲಿರುವ ಪ್ಯಾನ್ ಇಂಡಿಯಾ ಸಿನಿಮಾಗೆ ಮೊದಲ ಬಾರಿಗೆ ಝೀ ಸಿನಿಮಾಸ್ ಬಂಡವಾಳ ಹೂಡುತ್ತಿದೆ. ಇದಕ್ಕೆ ಕಾರಣ ಕೆಜಿಎಫ್ ಸಿನಿಮಾ ಯಶಸ್ಸು ಹಾಗೂ ನ್ಯಾಷನಲ್ ಸ್ಟಾರ್ ಆಗಿ ಹೊರಹಿಮ್ಮಿರುವ ಯಶ್ ಎನ್ನಲಾಗಿದೆ. ಮಾತ್ರವಲ್ಲದೆ ನರ್ತನ್ ಸಹ ಮಫ್ತಿ ಸಿನಿಮಾ ಮೂಲಕ ಗೆಲವು ಕಂಡ ನಿರ್ದೇಶಕರಾಗಿದ್ದು, ಹೀಗಾಗಿ ಝೀ ಸಿನಿಮಾಸ್ ಬಂಡವಾಳ ಹೂಡಲು ಮುಂದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗೆದ್ದ ಇಬ್ಬರ ಕಾಂಬಿನೇಶನ್‍ನಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಝೀ ಸಿನಿಮಾಸ್ ಬಂಡವಾಳ ಹೂಡುವ ವಿಚಾರ ಗುಟ್ಟಾಗಿಯೇ ಉಳಿದಿದೆ. ಈ ಬಗ್ಗೆ ನರ್ತನ್ ಅಥವಾ ಯಶ್ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಗಾಂಧಿ ನಗರದಲ್ಲಿ ಈ ವಿಚಾರ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಇತ್ತ ಯಶ್ ಅವರ ಮುಂದಿನ ಸಿನಿಮಾ ಕುರಿತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ವಿಚಾರ ಕೇಳಿ ಫುಲ್ ಖುಷ್ ಆಗಿದ್ದಾರೆ. ಆದರೆ ಅಧಿಕೃತ ಹೇಳಿಕೆಯೊಂದೇ ಹೊರ ಬೀಳಬೇಕಿದೆ.

ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ರಿಲೀಸ್ ದಿನಾಂಕ ಮುಂದೂಡಲಾಗಿದೆ. ಇದೀಗ ಜುಲೈ 16ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿದೆ. ಕೆಜಿಎಫ್-2ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅವರ ಮತ್ತೊಂದು ಸಿನಿಮಾ ಕುರಿತು ಅಪ್‍ಡೇಟ್ ಸಿಕ್ಕಿದೆ.

Comments

Leave a Reply

Your email address will not be published. Required fields are marked *