ಯತ್ನಾಳ್, ಬಿಎಸ್‍ವೈ ಮುಖಾಮುಖಿ – ನಾನು, ನೀನು ಕೂತು ಮಾತನಾಡೋಣವೆಂದ ಸಿಎಂ

ಬೆಂಗಳೂರು: ವಿಧಾನಸಭೆಯ ಮೊಗಸಾಲೆಯಲ್ಲಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮುಖಾಮುಖಿಯಾದರು.

ವಿಧಾನಸಭೆ ಕಲಾಪ ಮುಂದೂಡುತ್ತಲೇ ಯಡಿಯೂರಪ್ಪ, ಯತ್ನಾಳ್ ಮುಖಾಮುಖಿ ಭೇಟಿಯಾದರು. ಈ ವೇಳೆ ಯತ್ನಾಳ್ ಬೆನ್ನು ತಟ್ಟಿದ ಯಡಿಯೂರಪ್ಪ, ನಾನು ನೀನು ಕುಳಿತು ಮಾತಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮಾತಾಡೋಣ. ಏನು ಬೇಕೋ ಮಾತಾಡೋಣ ಎಂದು ಬಿಎಸ್‍ವೈ ಅವರು ಯತ್ನಾಳ್ ಗೆ ಭರವಸೆ ನೀಡಿದರು.

ಯತ್ನಾಳ್ ಅಷ್ಟೆಲ್ಲ ಕಿಡಿಕಾರಿದರೂ ಅಲ್ಲದೆ ಮುಜುಗರದ ಹೇಳಿಕೆ ಕೊಟ್ಟರೂ ಸಿಎಂ ಸಾಫ್ಟ್ ಆದರು. ಯತ್ನಾಳ್ ರನ್ನು ಮಾತುಕತೆಗೆ ಆಹ್ವಾನಿಸಿದ ಸಿಎಂ ಅವರು ಈ ಮೂಲಕ ಇಬ್ಬರ ಮಧ್ಯೆ ಸಂಘರ್ಷ ನಿಲ್ಲಿಸೋಣ ಎಂಬ ಸಂದೇಶ ರವಾನಿಸಿದರು.

ಯತ್ನಾಳ್ ಜೊತೆ ಸಿಎಂ ಸಂಧಾನಕ್ಕೆ ಮುಂದಾದ ಕಾರಣ ಏನು?, ಪಂಚಮಸಾಲಿ ಹೋರಾಟ ನಿಲ್ಲಲಿ ಎಂಬ ಉದ್ದೇಶವಾ..? ಅಥವಾ ಸದ್ಯಕ್ಕೆ ಯತ್ನಾಳ್ ಜೊತೆ ವಿರಸಕ್ಕಿಂತ ಸ್ನೇಹವೇ ಸೂಕ್ತ ಅನ್ನೋ ಅಭಿಪ್ರಾಯಕ್ಕೆ ಬಂದ್ರಾ ಎಂಬ ಅನುಮಾನ ಎದ್ದಿದೆ.

Comments

Leave a Reply

Your email address will not be published. Required fields are marked *