ಯತ್ನಾಳ್ ಪರ ಬ್ಯಾಟ್ ಬೀಸಿದ ಈಶ್ವರಪ್ಪ

ವಿಜಯಪುರ: ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಇಲಾಖೆಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿವೆ. ಮೀಸಲಾತಿ ಹೋರಾಟವನ್ನ ನಾನು ಸ್ವಾಗತ ಮಾಡ್ತೀನಿ. ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹಿಂದುತ್ವದ ಪ್ರಮುಖ ಶಕ್ತಿ. ಸಿಎಂ ಯಡ್ಡಿಯೂರಪ್ಪ ಹಾಗೂ ಮಗ ವಿಜಯೇಂದ್ರನ ಬಗ್ಗೆ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ.ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಹೇಳಿದ್ದೀನಿ ಎಂದು ಪರೋಕ್ಷವಾಗಿ ಯತ್ನಾಳ್ ಪರ ಸಚಿವ ಕೆ.ಎಸ್.ಈಶ್ವರಪ್ಪ ಬ್ಯಾಟ್ ಬೀಸಿದರು.

ಮೀಸಲಾತಿಯನ್ನು ಉಳ್ಳವರೆ ಅನುಭವಿಸುತ್ತಿದ್ದಾರೆ. ಅಪ್ಪ ಎಂಪಿ, ಮಗ ಶಾಸಕರಾಗುತ್ತಿದ್ದಾರೆ. ರಾಜಕೀಯ ಮೀಸಲಾತಿ ಸಹ ಸಿರಿವಂತರೆ ಅನುಭವಿಸುತ್ತಿದ್ದಾರೆ. ರಾಹುಲ್ ಗಾಂಧಿ ಏನ್ ಮಾಡ್ತಾರೋ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಬೋಸ್ ನಂತವರ ರಕ್ತದ ಒಂದ ಅಂಶವಾದರೂ ಇದೆಯಾ ಎಂದು ಪ್ರಶ್ನಿಸಿದರು. ಇನ್ನು ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿದ ಮುಸ್ಲಿಂ ಲೀಗ್ ದೇಶದ್ರೋಹಿ ಪಕ್ಷ. ಹಾಗಾಗಿ ಈ ಎರಡು ಪಕ್ಷಗಳ ಜೊತೆ ಬಿಜೆಪಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದರು.

ಕಾಂಗ್ರೆಸ್‍ಗೆ ರಾಮನ ಶಾಪ ಬಿಡಲ್ಲ: ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ರಾಮನ ಶಾಪದಿಂದ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ ಅಂತಾ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಿಜಯಪುರದಲ್ಲಿ ವಾಗ್ದಾಳಿ ನಡೆಸಿದರು.

ಮುಸ್ಲಿಂರನ್ನ ಸಂತೃಪ್ತಿ ಪಡೆಸಲು ಹಿಂದೂ ಯುವಕರ ಕಗ್ಗೊಲೆಗಳು ಆಗಿವೆ. ಈಗ ರಾಮ ಮಂದಿರದ ಬಗ್ಗೆ ಅಕೌಂಟ್ ಕೇಳ್ತಿದ್ದಾರೆ. ಇವರಿಗೆ ರಾಮನ ಶಾಪ ಬಿಡಲ್ಲ. ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಮುಸ್ಲಿಮರ ಅಭಿವೃದ್ಧಿಗೆ ಎಷ್ಟೋ ಸಾವಿರ ಕೋಟಿ ಕೊಡ್ತೀನಿ ಅಂತಿದ್ದಾರೆ. ಅವರ ಪಕ್ಷದವರೇ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳ್ತಿಲ್ಲ. ಡಿಕೆಶಿ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳುತ್ತಿಲ್ಲ ಎಂದು ಕಿಚಾಯಿಸಿದರು.

Comments

Leave a Reply

Your email address will not be published. Required fields are marked *