ಯಡಿಯೂರಪ್ಪ ಪರವಾಗಿ 65ಕ್ಕೂ ಹೆಚ್ಚು ಶಾಸಕರ ಸಹಿ: ರೇಣುಕಾಚಾರ್ಯ

ಬೆಂಗಳೂರು: ನಾಯಕತ್ವ ಬದಲಾವಣೆ ವಿವಾಧದ ನಡುವೆ 65ಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ಪರವಾಗಿ ಸಹಿ ಹಾಕಿರುವ ಪತ್ರ ನನ್ನ ಬಳಿ ಇದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಯಡಿಯೂರಪ್ಪನವರ ಪರವಾಗಿ ಶಾಸಕರು ಸಹಿ ಹಾಕಿರುವ ಪತ್ರ ಈಗಾಗಲೇ ನನ್ನ ಹತ್ತಿರ ಇದೆ. ಕನ್ನಡದಲ್ಲಿ ರಾಜ್ಯ ಅಧ್ಯಕ್ಷರಿಗೆ.ಇಂಗ್ಲೀಷ್ ನಲ್ಲಿ ಕೇಂದ್ರ ನಾಯಕರಿಗೆ ಪತ್ರ ಹಿಂದೆಯೇ ಸಿದ್ಧಪಡಿಸಲಾಗಿದೆ. ಅದು ನನ್ನ ಬಳಿ ಇದೆ. 65ಕ್ಕೂ ಹೆಚ್ಚು ಶಾಸಕರು ಆ ಪತ್ರಕ್ಕೆ ಸಹಿ ಹಾಕಿದ್ದಾರೆ ಅದು ನನ್ನ ಬಳಿ ಇದೆ. ಇನ್ನೂ ಕೆಲವರ ಸಹಿ ನಾವೇ ಕೇಳಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಇದ್ದಾರೆ ಅಂತಾ ಕೆಲವರು ಹೇಳ್ತಾರೆ. ನಮಗೆ ಏನ್ರಿ, ಅವರು ಮಾತು ಕೇಳಿ ಮಾಡುವಂತದ್ದು. ಅವರು ಬಿಜೆಪಿ ಉಪಾಧ್ಯಕ್ಷರಷ್ಟೆ. ನಾವು ಸ್ವ-ಇಚ್ಚೆಯಿಂದ ಸಹಿ ಸಂಗ್ರಹ ಮಾಡಿದ್ದೇವೆ. ಸಿಎಂ ವಿರುದ್ಧ ಮಾತಾಡುವವರಿಂದ ಪಕ್ಷಕ್ಕೆ ಧಕ್ಕೆ ಯಾಗುತ್ತಿದೆ. ಹೀಗಾಗಿ ಇವರ ವಿರುದ್ಧ ಕ್ರಮ ಆಗಬೇಕು. ಜೊತೆಗೆ ಯಡಿಯೂರಪ್ಪರೇ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕು. ಹೀಗಂತ ಸಹಿ ಸಂಗ್ರಹ ಪತ್ರ ಬರೆಯಲಾಗಿದೆ. ಅದನ್ನು ಶೀಘ್ರವೇ ಹೈಕಮಾಂಡ್ ಗೆ ಕಳುಹಿಸುತ್ತೇವೆ. ಕೋವಿಡ್ ಮುಗಿದ ಮೇಲೆ ಪತ್ರ ಹೈ ಕಮಾಂಡ್ ಗೆ ತಲುಪಿಸುತ್ತೇವೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *