ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ನಾಯಕ ನರೇಂದ್ರ ಟಿಕಾಯತ್ ಎಚ್ಚರಿಕೆ ಕೊಟ್ಟಿದ್ದಾರೆ.

ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಟಿಕಾಯತ್ ಕುಟುಂಬ ಮುಂದೆಯು ಪ್ರತಿಭಟನೆಯನ್ನು ಮುಂದುವರಿಸುತ್ತದೆ. ಎಲ್ಲಿಯವರೆಗೆ ಎಂದರೇ ನರೇಂದ್ರ ಮೋದಿಯವರ ಸರ್ಕಾರದ ಅವಧಿ ಇನ್ನು ಮೂರೂವರೆ ವರ್ಷ ಪೂರ್ತಿಗೊಳ್ಳುವವರೆಗೂ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ನರೇಂದ್ರ ಟಿಕಾಯತ್ ಭಾರತ್ ಕಿಸಾನ್ ಯೂನಿಯನ್ ಸಂಘಟನೆಯ ಯಾವುದೇ ಉನ್ನತ ಹುದ್ಧೆಯನ್ನು ಅಲಂಕರಿಸದೆ ತಮ್ಮ ಕುಟುಂಬದಲ್ಲಿನ ಕೃಷಿ ಚಟುಚಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ತಮ್ಮ ಅಣ್ಣಂದಿರಿಬ್ಬರು ರೈತರೊಂದಿಗೆ ಹೋರಾಟ ಮಾಡುತ್ತಿದ್ದಾರೆ ಅವರಿಗೆ ಯಾವಾಗಲೂ ಬೆಂಬಲ ಸೂಚಿಸಿಸುವುದಾಗಿ ತಿಳಿಸಿದ್ದಾರೆ.

ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸಲು ನಮ್ಮ ಪೂರ್ತಿ ಕುಟುಂಬ ತಯಾರಾಗಿದೆ. ನಾನು ಸಿಸೌಲಿಯಲ್ಲಿ ಕುಟುಂಬದೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರೂ ನನ್ನ ಮನಸ್ಸು ರೈತರ ಪ್ರತಿಭಟನೆಯಲ್ಲಿರುತ್ತದೆ. ಬಿಡುವಿನ ವೇಳೆಯಲ್ಲಿ ನಾನು ಘಾಜಿಪುರ ಗಡಿಯಲ್ಲಿ ಪ್ರತಿಭಟನೆ ನಿರತರಾಗಿರುವ ರೈತರನ್ನು ಮಾತನಾಡಿಸಿ ಬರುತ್ತಿದ್ದೇನೆ ಎಂದು ನರೇಂದ್ರ ಟಿಕಾಯತ್ ವಿವರಿಸಿದರು.
ಬಿಕೆಯು ಸಹ ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನಾಗಿ ಜನಿಸಿರುವ ರಾಕೇಶ್ ಟಿಕಾಯತ್ ಬಿಕೆಯು ವಕ್ತಾರರಾಗಿ ರೈತ ಹೋರಾಟವನ್ನು ಮಾಡುತ್ತಿದ್ದರೆ, ಇವರ ಹಿರಿಯಣ್ಣ ನರೇಶ್ ಟಿಕಾಯತ್ ಬಿಕೆಯುನ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ರಾಕೇಶ್ ಟಿಕಾಯತ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಅವರೂ ಕೂಡ ರೈತರ ಪ್ರತಿಭಟನೆಗೆ ಸಹಕಾರ ಮಾಡುತ್ತಿದ್ದು ಫೆಬ್ರವರಿ 8ರಂದು ಮೆಲ್ಬರ್ನ್‍ನಲ್ಲಿ ನಡೆದ ರೈತ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಈ ಮೂಲಕ ಟಿಕಾಯತ್ ಕುಟುಂಬ ಸದಸ್ಯರೆಲ್ಲರೂ ರೈತ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ.

Leave a Reply