ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಕೇಂದ್ರ ಸರ್ಕಾರ ಸಾಲ ಯೋಜನೆಯನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.

ಇದರ ಜೊತೆಯಲ್ಲಿಯೇ ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂಪಾಯಿ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ಅನುದಾನವನ್ನ ನಾನ್ ಮೆಟ್ರೋ ಮೆಡಿಕಲ್ ಮೂಲಸೌಕರ್ಯಗಳಿಗೆ ಬಳಕೆಗೆ ಮೀಸಲಿಡಲಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಹಲವು ವಲಯಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಕೇಂದ್ರ ಸಹಾಯಕ್ಕೆ ಮುಂದಾಗಬೇಕೆಂದು ಉದ್ಯಮಗಳ ಒತ್ತಾಯಿಸಿದ್ದರು. ಸರ್ಕಾರ ಸಹ ಸಹಾಯ ನೀಡುವ ಕುರಿತು ಈ ಹಿಂದೆ ಸುಳಿವು ನೀಡಿತ್ತು.

ವಿತ್ತ ಸಚಿವರ ಘೋಷಣೆಗಳು
1. ಎಕನಾಮಿಕ್ ರಿಲೀಫ್
* ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ವಲಯಗಳಿಗೆ 1.1 ಲಕ್ಷ ಕೋಟಿ ರೂ.ಯ ಲೋನ್ ಗ್ಯಾರಂಟಿ ಸ್ಕೀಮ್
* ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂ.
* ಇತರೆ ವಲಯಗಳು 60 ಸಾವಿರ ಕೋಟಿ ರೂ.
* ಆರೋಗ್ಯ ವಲಯದಲ್ಲಿ ನೀಡಲಾಗುವ ಸಾಲದ ಮೇಲಿನ ವಾರ್ಷಿಕ ಬಡ್ಡಿ ಶೇ.7.95
* ಇನ್ನುಳಿದ ವಲಯಗಳಿಗೆ ನೀಡಲಾಗುವ ಸಾಲದ ಮೇಲಿನ ವಾರ್ಷಿಕ ಬಡ್ಡಿ ಶೇ.8.25

2. ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‍ಜಿಎಸ್)
* ಇಸಿಎಲ್‍ಜಿಎಸ್ ನಲ್ಲಿ 1.5 ಲಕ್ಷ ಕೋಟಿ ಹೆಚ್ಚುವರಿಯಾಗಿ ನೀಡಲಾಗುವುದು.
* ಪ್ರಥಮವಾಗಿ ಈ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಘೋಷಿಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 4.5 ಲಕ್ಷ ರೂ. ಆಗಿದೆ.
* ಈ ಯೋಜನೆಯಲ್ಲಿ ಭಾಗಿಯಾದ ಎಲ್ಲ ವಲಯಗಳಿಗೆ ಇದರ ಲಾಭ ಸಿಕ್ಕಿದೆ.

3. ಕ್ರೆಡಿಟ್ ಗ್ಯಾರಂಟಿ ಸ್ಕೀಮ್
* ಸಣ್ಣ ವ್ಯಾಪಾರಿಗಳು- ವೈಯಕ್ತಿಯ ಎನ್‍ಬಿಎಫ್‍ಸಿ, ಮೈಕ್ರೋ ಫೈನಾನ್ಸ್ ಇನ್‍ಸ್ಟಿಟ್ಯೂಟ್ ಗಳು 1.25 ಲಕ್ಷ ರೂ.ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ.
* ಈ ಸಾಲದ ಮೇಲೆ ಎಂಸಿಎಲ್‍ಆರ್ ಅನ್ವಯ ಬ್ಯಾಂಕುಗಳು ಶೇ.2ರಷ್ಟು ಬಡ್ಡಿ ವಿಧಿಸಲಿವೆ. ಈ ಸಾಲದ ಅವಧಿ ಮೂರು ವರ್ಷ ಇರಲಿದ್ದು, ಸರ್ಕಾರವೇ ಗ್ಯಾರಂಟಿ ನೀಡಲಿದೆ.
* ಹೊಸ ಸಾಲಗಳ ವಿತರಣೆ ಈ ಯೋಜನೆಯ ಮುಖ್ಯ ಉದ್ದೇಶ.
* 89 ದಿನಗಳ ಡಿಫಾಲ್ಟರ್ ಸೇರಿದಂತೆ ಎಲ್ಲ ಜನರು ಈ ಯೋಜನೆಯಲ್ಲಿ ಸಾಲ ಪಡೆಯಬಹುದಾಗಿದೆ. ಈ ಯೋಜನೆಯಿಂದ ಅಂದಾಜು 25 ಲಕ್ಷ ಜನರಿಗೆ ಲಾಭ ಸಿಗಲಿದೆ.
* ಅಂದಾಜು 7,500 ಕೋಟಿ ರೂ. ಈ ಯೋಜನೆಯಲ್ಲಿ ಹಣ ಮೀಸಲಿರಲಿದ್ದು, ಮಾರ್ಚ್ 31,2022ರವರೆಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

4. ರಿಜಿಸ್ಟರ್ ಗೈಡ್/ಟ್ರಾವೆಲ್ ಟೂರಿಸಂ ಮಧ್ಯಸ್ಥಗಾರರಿಗೆ ಆರ್ಥಿಕ ಸಹಾಯ
* ಕೋವಿಡ್ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೋಂದಾಯಿತ ಟೂರಿಸ್ಟ್ ಗೈಡ್ ಮತ್ತು ಟ್ರಾವೆಲ್ ಟೂರಿಸಂನ ಮಧ್ಯಸ್ಥಗಾರರು (ಏಜೆಂಟ್) ಆರ್ಥಿಕ ನೆರವು ದೊರಕಲಿದೆ.
* ಈ ವಿಭಾಗದಲ್ಲಿ ನೋಂದಾಯಿತ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷ ರೂ.ವರೆಗೂ ಮತ್ತು ಟೂರಿಸ್ಟ್ ಏಜೆನ್ಸಿಗಳಿಗೆ 10 ಲಕ್ಷ ರೂ. ವರೆಗೂ ಸಾಲ ಸಿಗಲಿದೆ.
* ಈ ಸಾಲಕ್ಕೆ ಶೇ.100ರಷ್ಟು ಗ್ಯಾರಂಟಿ ನೀಡಲಾಗವುದು. ಜೊತೆಗೆ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಚಾರ್ಜ್ ಅನ್ವಯ ಆಗಲ್ಲ.

5. ಮೊದಲ 5 ಲಕ್ಷ ವಿದೇಶಿ ಪ್ರವಾಸಿಗರ ಉಚಿತ ಟೂರಿಸ್ಟ್ ವೀಸಾ
* ಈ ಸ್ಕೀಮ್ ಮಾರ್ಚ್ 31, 2022ರವರೆಗೆ ಇರಲಿದ್ದು, ಹಣಕಾಸು ಸಚಿವಾಲಯದಿಂದ 100 ಕೋಟಿ ಸಹಾಯ ನೀಡಲಾಗುತ್ತದೆ.
* ಓರ್ವ ಪ್ರವಾಸಿಗೆ ಒಂದು ಬಾರಿ ಮಾತ್ರ ಈ ಸ್ಕೀಮ್ ಲಾಭ ಸಿಗಲಿದೆ.
* ವಿದೇಶಿ ಪ್ರವಾಸಿಗರಿಗೆ ಯೋಜನೆಯ ಲಾಭ ಸಿಗುತ್ತಿದ್ದಂತೆ, ಈ ಸ್ಕೀಮ್ ಲಾಭ ಆರಂಭವಾಗುತ್ತದೆ.
* 2019ರಲ್ಲಿ 1.93 ಕೋಟಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ.

6. ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ
* ಈ ಯೋಜನೆಯನ್ನ ಕೇಂದ್ರ 2019ರಲ್ಲಿಯೇ ಜಾರಿಗೆ ತಂದಿತ್ತು. ಈ ಯೋಜನೆಯ ಅವಧಿಯನ್ನ 31 ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.
* ಈಗಾಗಲೇ 21.42 ಲಕ್ಷ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದು, 902 ಕೋಟಿ ರೂ. ಖರ್ಚು ಮಾಡಲಾಗಿದೆ.
* 15 ಸಾವಿರಕ್ಕೂ ಕಡಿಮೆ ವೇತನ ಪಡೆಯುವ ಕೆಲಸಗಾರರಿಗೆ ಮತ್ತು ಕಂಪನಿಗಳಿಗೆ ಸರ್ಕಾರ ಪಿಎಫ್ ಪಾವತಿಸುತ್ತದೆ.
* ಸರ್ಕಾರ ಈ ಯೋಜನೆಯಲ್ಲಿ 22,810 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಿದ್ದು, ಇದರಿಂದ 58.50 ಲಕ್ಷ ಜನರಿಗೆ ಲಾಭ ಸಿಗಲಿದೆ.
* ಸರ್ಕಾರ ನೌಕರರು-ಕಂಪನಿಗೆ ಶೇ.12-ಶೇ.12 ಪಿಎಫ್ ನೀಡುತ್ತಿದೆ.

7. ಕೃಷಿಗೆ ಸಂಬಂಧಿಸಿದ ಸಬ್ಸಿಡಿ
* ಸರ್ಕಾರ ಕೃಷಿಗೆ ಹೆಚ್ಚುವರಿಯಾಗಿ 14,775 ಕೋಟಿ ನೆರವು ನೀಡಿದೆ. ಇದರಲ್ಲಿ 9,125 ಕೋಟಿ ರೂ. ಸಬ್ಸಿಡಿಯನ್ನು ಡಿಎಪಿ ರಸಗೊಬ್ಬರ ಮೇಲೆ ನೀಡಲಾಗುವುದು.
* 5,650 ಕೋಟಿ ಸಬ್ಸಿಡಿಯನ್ನು ಎನ್‍ಪಿಕೆ ಮೇಲೆ ನೀಡಲಾಗುತ್ತದೆ.
* ರಬಿ ಸೀಸನ್ 2020-21ರಲ್ಲಿ 432.48 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿತ್ತು.
* ಇಲ್ಲಿಯವರೆಗೆ ರೈತರಿಗೆ 85,413 ಕೋಟಿ ರೂ. ನೇರವಾಗಿ ನೀಡಲಾಗಿದೆ.

8. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:
* ಕೋವಿಡ್ ಮೊದಲೆ ಅಲೆಯಲ್ಲಿ ಬಡವರ ನೆರವಿಗಾಗಿ ಕೇಂದ್ರ ಮಾರ್ಚ್ 26,2020ರಂದು ಈ ಯೋಜನೆಯನ್ನ ಘೋಷಿಸಿತ್ತು. ಆರಂಭದಲ್ಲಿ ಏಪ್ರಿಲ್ ನಿಂದ ಜೂನ್ 2020ರವರೆಗೆ ಈ ಯೋಜನೆಯಡಿ ಪಡಿತರ ವಿತರಣೆ ಮಾಡಲಾಗಿತ್ತು. ನಂತರ ನವೆಂಬರ್ 2020ರವರೆಗೂ ವಿಸ್ತರಿಸಲಾಗಿತ್ತು.
* 2020-21ರಲ್ಲಿ ಈ ಯೋಜನೆಗೆ 1,33,972 ಕೋಟಿ ರೂ. ವ್ಯಯ ಮಾಡಲಾಗಿತ್ತು.
* ಮೇ 2021ರಲ್ಲಿ ಮತ್ತೆ ಯೋಜನೆ ಆರಂಭಿಸಿದ್ದು, ನವೆಂಬರ್ ವರೆಗೂ ಉಚಿತ ಪಡಿತರ ಸಿಗಲಿದೆ. ಈ ವರ್ಷವೂ 93,869 ಕೋಟಿ ಖರ್ಚು ಮಾಡಲು ಸರ್ಕಾರ ಮುಂದಾಗಿದೆ. 2020 ಮತ್ತು 2021ರಲ್ಲಿ ಒಟ್ಟು ಈ ಯೋಜನೆಗೆ 2,27,841 ಕೋಟಿ ರೂ. ಖರ್ಚು ಆಗಲಿದೆ.

9. 23,220 ಕೋಟಿ ರೂ. ಪಬ್ಲಿಕ್ ಹೆಲ್ತ್
* ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಹಣ ಬಳಕೆಯಾಗಲಿದೆ. ಈ ಅನುದಾನದಲ್ಲಿ ಐಸಿಯು ಬೆಡ್, ವೆಂಟಿಲೇಟರ್ ಬೆಡ್, ಅಂಬುಲೆನ್ಸ್ ಸೇರಿದಂತೆ ಇನ್ನಿತರ ಸೌಕರ್ಯ ಹೆಚ್ಚಳ.
* ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ
* ಟೆಸ್ಟಿಂಗ್ ಹೆಚ್ಚಳ, ಸಪ್ರೋಟಿವ್ ಡಯಾಗ್ನೊಸ್ಟಿಕ್ ಮತ್ತು ಟೆಲಿಕನ್ಸಲ್ಟೇಶನ್ ಸೌಕರ್ಯ ಹೆಚ್ಚಳ ಈ ಅನುದಾನದ ಬಳಕೆ
* 31 ಮಾರ್ಚ್ 2022ರವರೆಗೆ ಈ ಅನುದಾನದ ಬಳಕೆಗೆ ಕಾಲಾವಕಾಶ ನೀಡಲಾಗಿದೆ. ಕಳೆದ ವರ್ಷ ಈ ಸ್ಕೀಂನಲ್ಲಿ 15 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿತ್ತು.

10. ಇತರೆ ಘೋಷಣೆಗಳು
* ಅಪೌಷ್ಠಿಕತೆ ಮುಕ್ತಿ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ಉತ್ತೇಜನಕ್ಕಾಗಿ ವಿಶೇಷ ತಳಿಯ ಸಸಿ, ಬೀಜಗಳನ್ನು ಒದಗಿಸುವುದು. ಐಸಿಆರ್ ಜೈವಿಕ ಬಲವರ್ಧಿತ ಬೆಳೆ ಪ್ರಬೇಧಗಳ ಅಭಿವೃದ್ಧಿಪಡಿಸುವಿಕೆ.
* ಈಶಾನ್ಯ ಭಾರತದ ರೈತರಿಗಾಗಿ ಸಂಘಟನೆ ರಚನೆ. 1982ರಲ್ಲಿ ಸಂಘಟನೆ ರಚನೆ ಮಾಡಲಾಗಿದೆ. ಇದುವರೆಗೂ 75 ರೈತ ಸಂಘಟನೆಗಳು ಇದರೊಂದಿಗೆ ಸೇರ್ಪಡೆಯಾಗಿವೆ.
* ಈ ಸಂಘಟನೆಗಳು ರೈತರಿಗೆ ಮಧ್ಯವರ್ತಿಗಳನ್ನು ದೂರವಿರಿಸಿ ಅವರ ಆದಾಯವನ್ನ ಶೇ.10 ರಿಂದ 15ರಷ್ಟು ಹೆಚ್ಚಿಸಲು ಸಹಾಯಕಾರಿ ಆಗಲಿವೆ.

Comments

Leave a Reply

Your email address will not be published. Required fields are marked *