ಮೊಮ್ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಹೆಚ್.ವಿಶ್ವನಾಥ್

ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮೊಮ್ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.

ಕೆ.ಆರ್.ನಗರದ ತಮ್ಮ ನಿವಾಸದ ಮುಂಭಾಗದಲ್ಲಿಯೇ ಮೊಮ್ಮಕ್ಕಳೊಂದಿಗೆ ಆಟವಾಡಿದರು. ಬ್ಯಾಟಿಂಗ್ ಬಳಿಕ ಬೌಲಿಂಗ್ ಮಾಡಿ ಮಕ್ಕಳ ಜೊತೆ ಮಗುವಾದರು. ಅಜ್ಜ ಬ್ಯಾಟಿಂಗ್ ಮಾಡೋದನ್ನ ಕಂಡು ಖುಷಿಯಾದ ಮಕ್ಕಳು ಚಪ್ಪಾಳೆ ತಟ್ಟೋದನ್ನ ವೀಡಿಯೋದಲ್ಲಿ ನೋಡಬಹುದು.

ವಿಶ್ವನಾಥ್ ಬ್ಯಾಟ್ ಬೀಸುವ ಮತ್ತು ಬೌಲಿಂಗ್ ಮಾಡೋ ದೃಶ್ಯಗಳನ್ನ ಮೊಮ್ಮಕ್ಕಳು ಮೊಬೈಲಿನಲ್ಲಿ ಸೆರೆ ಹಿಡಿದ್ದಾರೆ. ಸದಾ ರಾಜಕೀಯ ಕೆಲಸಗಳಲ್ಲಿ ಬ್ಯುಸಿಯಾಗಿರೋ ವಿಶ್ವನಾಥ್ ಮೊಮ್ಮಕ್ಕಳೊಂದಿಗೆ ಸಮಯ ಕಳೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Comments

Leave a Reply

Your email address will not be published. Required fields are marked *