ಮೊಣಕೈನಲ್ಲಿ ಅಭಿಮಾನಿ ಬಿಡಿಸಿದ ಭಾವಚಿತ್ರಕ್ಕೆ ಅಪ್ಪು ಫುಲ್ ಫಿದಾ

ಬೆಂಗಳೂರು: ಬೆಂಗಳೂರು: ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ಅಭಿಮಾನಿಗಳು ಏನು ಮಾಡಲು ಸಿದ್ಧರಿದ್ದಾರೆ. ಹುಟ್ಟುಹಬ್ಬಗಳು ಬಂದರಂತೂ ಕೇಳೋದೇ ಬೇಡ, ನಟ ಅಥವಾ ನಟಿಯ ಬರ್ತ್ ಡೇಯನ್ನು ತಮ್ಮದೇ ಹುಟ್ಟುಹಬ್ಬ ಎಂಬಂತೆ ಆಚರಿಸುತ್ತಾರೆ. ಒಟ್ಟಿನಲ್ಲಿ ಏನೆಲ್ಲಾ ಹರಸಾಹಸ ಮಾಡಿ ತನ್ನ ನೆಚ್ಚಿನ ನಟ ತಮ್ಮತ್ತ ಒಂದು ಬಾರಿ ತಿರುಗಿ ನೋಡುವಂತೆ ಪ್ರಯತ್ನ ಪಡುತ್ತಿರುತ್ತಾರೆ. ಅಂತೆಯೇ ಅಭಿಮಾನಿಯೊಬ್ಬ ತನ್ನ ಮೊಣಕೈನಲ್ಲಿ ಭಾವಚಿತ್ರ ಬಿಡಿಸಿ ನಟ ಪುನೀತ್ ರಾಜ್ ಕುಮಾರ್ ಗಮನ ಸೆಳೆದಿದ್ದಾನೆ.

ತನ್ನ ಮೊಣಕೈ ಬಳಸಿಕೊಂಡು ಅಪ್ಪು ಚಿತ್ರ ಬಿಡಿಸಿದ ಕಲಾವಿದನ ಕಲೆಗೆ ಪವರ್ ಸ್ಟಾರ್ ಮನಸೋತಿದ್ದಾರೆ. ಅಲ್ಲದೆ ತುಂಬಾ ತುಂಬಾನೇ ಧನ್ಯವಾದ ಎಂದು ಹೇಳಿದ್ದಾರೆ.

ಈ ಕುರಿತು ಅಭಿಮಾನಿ ತನ್ನ ಭಾವಚಿತ್ರ ಬಿಡಿಸುತ್ತಿರುವ ವೀಡಿಯೋ ಶೇರ್ ಮಾಡಿರುವ ಅಪ್ಪು, ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.

ಸದ್ಯ ತನ್ನ ನೆಚ್ಚಿನ ನಾಯಕನ ಚಿತ್ರ ಬಿಡಿಸುತ್ತಿರುವ ಅಭಿಮಾನಿಯ ವೀಡಿಯೋವನ್ನು ಪವರ್ ಸ್ಟಾರ್ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸಂತಸ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ಭಾನುವಾವಷ್ಟೇ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದ ನಟಿ ಮೇಘನಾ ರಾಜ್ ಅವರ ಫೋಟೋಗಳ ಪೈಕಿ ಕಲಾವಿದನ ಕೈಯಲ್ಲಿ ಅರಳಿದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಮೇಘನಾ ಅವರು ಒಬ್ಬರೇ ನಿಂತುಕೊಂಡು ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು.

ಆ ಫೋಟೋಗೆ ಕಲಾವಿದ ಕರಣ್ ಆಚಾರ್ಯ ಜೀವ ನೀಡಿದ್ದಾರೆ. ಅಂದರೆ ಆ ಫೋಟೋವನ್ನು ಚಿರಂಜೀವಿ ಸರ್ಜಾ ಅವರು ಮೇಘನಾ ಅವರ ಕೈ ಹಿಡಿದುಕೊಂಡು ಹೆಜ್ಜೆ ಹಾಕುತ್ತಿರುವಂತೆ ಎಡಿಟ್ ಮಾಡಲಾಗಿದೆ. ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *