ಮೊಟೋ ಜಿ9 ಟ್ರಿಪಲ್ ಕ್ಯಾಮೆರಾ ಬಿಡುಗಡೆ – ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ನವದೆಹಲಿ: ಭಾರತದ ಮಾರುಕಟ್ಟೆಗೆ ಮೊಟೊರೊಲಾ ಕಂಪನಿಯ ಮೊಟೊ ಜಿ9 ಡ್ಯುಯಲ್ ಸಿಮ್ ಸ್ಮಾರ್ಟ್‍ಫೋನ್ ಬಿಡುಗಡೆಯಾಗಿದೆ. ಲೆನೆವೊ ಮಾಲೀಕತ್ವದ ಮೊಟೊರೊಲಾ ಹೊಸ ಹ್ಯಾಂಡ್‍ಸೆಟ್ ಮೊಟೊ ಜಿ8 ಅಪ್‍ಗ್ರೇಡೆಡ್ ವೆರಿಯೆಂಟ್ ಇದಾಗಿದೆ.

ಮೊಟೊ ಜಿ9 ಟ್ರಿಪಲ್ ರಿಯರ್ ಕ್ಯಾಮೆರಾ, 6.5 ಇಂಚು ಡಿಸ್‍ಪ್ಲೇ, ವಾಟರ್ ರಿಪೈಲೆಂಟ್ ಸೇರಿದಂತೆ ಹಲವು ಫೀಚರ್ ಹೊಂದಿದೆ. ಮೊಟೊ ಜಿ9 ಸದ್ಯ ಮಾರುಕಟ್ಟೆಯಲ್ಲಿರುವ ರೆಡ್ಮಿ ನೋಟ್ 9ಪ್ರೊ, ಸ್ಯಾಮ್‍ಸಂಗ್ ಗೆಲ್ಯಾಕ್ಸಿ ಎಂ21 ಮತ್ತು ರಿಯಲ್ ಮಿ 6i ಜೊತೆ ಪೈಪೋಟಿ ನಡೆಸಲಿದೆ.

4ಜಿಬಿ ರ‌್ಯಾಮ್ 64 ಜಿಬಿ ಆಂತರಿಕ ಮೆಮೊರಿಯ ಈ ಫೋನಿಗೆ 11,499 ರೂ. ದರವನ್ನು ನಿಗದಿ ಮಾಡಿದೆ. ನೀಲಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯ ಇರುವ ಈ ಫೋನ್ ಮೊದಲ ಫ್ಲ್ಯಾಶ್ ಸೇಲ್ ಆಗಸ್ಟ್ 31ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‍ಕಾರ್ಟ್ ನಲ್ಲಿ ಆರಂಭವಾಗಲಿದೆ.

ಗುಣವೈಶಿಷ್ಟ್ಯ
ಡಿಸ್‍ಪ್ಲೇ ಮತ್ತು ಬಾಡಿ: 165.21*75.73*9.18 ಮಿಲಿ ಮೀಟರ್ ಗಾತ್ರ, 200 ಗ್ರಾಂ ತೂಕ, ಹೈ ಬ್ರಿಡ್ ಡ್ಯೂಯಲ್ ಸಿಮ್, 6.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಇವ್ ಟಚ್‍ಸ್ಕ್ರೀನ್(720*1600 ಪಿಕ್ಸೆಲ್, 270 ಪಿಪಿಐ) 20:09 ಆಸ್ಪೆಕ್ ಅನುಪಾತ ಹೊಂದಿದೆ. ಸ್ಕ್ರೀನ್ ಟು ಬಾಡಿ ರೆಶಿಯೋ ಶೇ.87 ರಷ್ಟಿದೆ.

ಪ್ಲಾಟ್‍ಫಾರಂ ಮತ್ತು ಮೆಮೊರಿ
ಆಂಡ್ರಾಯ್ಡ್ 10 ಓಎಸ್, ಕ್ವಾಲಕಂ ಸ್ನಾಪ್‍ಡ್ರಗನ್ 662 ಪ್ರೊಸೆಸರ್, 4ಜಿಬಿ ರ್ಯಾಮ್, 64 ಜಿಬಿ ಆಂತರಿಕ ಮೆಮೊರಿ. ಹೈ ಬ್ರಿಡ್ ಸಿಮ್ ಸ್ಲಾಟ್ ಕೊಟ್ಟಿರುವ ಕಾರಣ ಸಿಮ್ ಹಾಕುವ ಜಾಗದಲ್ಲಿ ಕಾರ್ಡ್ ಹಾಕಿದರೆ 512 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.

ಕ್ಯಾಮೆರಾ ಮತ್ತು ಇತರೇ:
ಹಿಂದುಗಡೆ 48 ಎಂಪಿ, ಎಫ್/1.7 ವೈಡ್ ಕ್ಯಾಮೆರಾ, 2 ಎಂಪಿ, ಎಫ್/2.4 ಇರುವ ಮ್ಯಾಕ್ರೋ, 2 ಎಂಪಿ ಎಫ್/2.4 ಇರುವ ಡೆಪ್ತ್ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿಗಾಗಿ 8 ಎಂಪಿ, ಎಫ್/2.0 ಇರುವ ಕ್ಯಾಮೆರಾವನ್ನು ನೀಡಲಾಗಿದೆ.

ಆಟೋ ಸ್ಮೈಲ್ ಕ್ಯಾಪ್ಚರ್, ಹೆಚ್‍ಡಿಆರ್, ಫೇಸ್ ಬ್ಯೂಟಿ, ಮ್ಯಾನ್ಯುವಲ್ ಮೋಡ್ ಮತ್ತು ರಾ ಫೋಟೋ ಔಟ್‍ಪುಟ್ ಸೇರಿದಂತೆ ಮುಂತಾದ ಫೀಚರ್ಸ್ ಗಳಿವೆ.

5.0 ಬ್ಲೂಟೂತ್, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ 5000 ಎಂಎಎಚ್ ಲಿಪೋ ಬ್ಯಾಟರಿ, 20 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಸಿಂಗಲ್ ಚಾರ್ಜ್ ನಲ್ಲಿ ಬ್ಯಾಟರಿ ಎರಡು ದಿನ ಬರಲಿದೆ. ಯುಎಸ್‍ಬಿ 2.0 ಟೈಪ್-ಸಿ ಮತ್ತು 3.5 ಎಂಎಂ ಹೆಡ್‍ಫೋನ್ ಜ್ಯಾಕ್.

Comments

Leave a Reply

Your email address will not be published. Required fields are marked *