ಮೇಕಪ್ ಮಾಡಿಕೊಳ್ಳಲು ಬೇಕಾದ ವಸ್ತುಗಳು ಯಾವುದು ಗೊತ್ತಾ?

ನೀವು ಯಾವಾಗಲಾದರೂ ಮೇಕಪ್ ಮಾಡಲು ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಿದ್ದೀರಾ ಮತ್ತು ಮೇಕಪ್ ಮಾಡಿಕೊಳ್ಳಲು ಖರೀದಿಸಬೇಕಾದ ವಸ್ತುಗಳು ಯಾವುದು ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ? ಐಬ್ರೋ ಪೆನ್ಸಿಲ್ ಮತ್ತು ಐಬ್ರೋ ಜೆಲ್ ನಡುವಿನ ವ್ಯತ್ಯಾಸವೇನು ಗೊತ್ತಾ? ಮೇಕಪ್ ಮಾಡಿಕೊಳ್ಳುವುದಾದರೂ ಹೇಗೆ ತಿಳಿದಿದ್ಯಾ? ಈ ಎಲ್ಲದರ ಕುರಿತ ಮಾಹಿತಿಗಳು ಈ ಕೆಳಗಿನಂತಿದೆ.

ಪ್ರೈಮರ್: ಪ್ರೈಮರ್‌ಗಳಲ್ಲಿ ಜೆಲ್‍ಗಳು, ಕ್ರೀಮ್‍ಗಳು ಹಾಗೂ ಸ್ಪ್ರೇಗಳು ಬರುತ್ತದೆ.

ಫೌಂಡೇಶನ್: ಫೌಂಡೇಶನ್ ಕ್ರೀಮ್ ನಿಮ್ಮ ಮೈಕಾಂತಿಗೆ ಸರಿಹೊಂದುವಂತೆ ಮಾಡುತ್ತದೆ. ಫೌಂಡೇಶನ್ ದ್ರವ್ಯ, ಕೆನೆ ಹಾಗೂ ಪೌಡರ್ ರೂಪದಲ್ಲಿ ಸಿಗುತ್ತದೆ. ಇದು ನಿಮ್ಮ ಮೈ ಬಣ್ಣವನ್ನು ಒಂದೇ ರೀತಿ ಕಾಣಿಸುವಂತೆ ಮಾಡುತ್ತದೆ. ಅಲ್ಲದೇ ನೀವು ಮಚ್ಚೆ ಮತ್ತು ಕಲೆಗಳನ್ನು ಹೊಂದಿದ್ದರೆ. ಅದನ್ನು ಕೂಡ ಫೌಂಡೇಶನ್ ಕ್ರೀಮ್ ಮರೆಮಾಚಿಸುತ್ತದೆ.

ಕನ್ಸೀಲರ್: ಇದು ಮುಖದಲ್ಲಿ ಕಪ್ಪು ಕಲೆಗಳು, ಮೊಡವೆ, ಇತರೆ ಯಾವುದೇ ಕಲೆಗಳನ್ನು ಕಾಣದೇ ಇರುವುದಕ್ಕೆ ಸಹಾಯಕವಾಗಿದೆ. ಜೊತೆಗೆ ಇದು ನಿಮ್ಮ ತ್ವಚೆಗೆ ಕನ್ಸೀಲರ್ ಹೆಚ್ಚು ಹೊಳಪು ನೀಡುತ್ತದೆ.

ಹೈ ಲೈಟರ್ ಹಾಗೂ ಕಂಟರ್: ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮುಖದ ಮೇಲೆ ಕುಯ್ದಿರುವ ಮಾರ್ಕ್‍ಗಳನ್ನು ನಾವು ಕಾಣದೇ ಇರಲು ಹೈ ಲೈಟರ್‍ಗಳೇ ಕಾರಣ. ಇದು ನಿಮ್ಮ ಮುಖದ ಮೇಲೆ ಏನಾದರೂ ಕುಯ್ದಿರುವ ಮಾರ್ಕ್ ಇದ್ದರೆ ಅದನ್ನು ನಿಮ್ಮ ಮೈ ಬಣ್ಣಕ್ಕೆ ಸರಿಹೊಂದುವಂತೆ ಕಾಣದೇ ಇರುವಂತೆ ಮಾಡುವಲ್ಲಿ ಹೈ ಲೈಟರ್ ಬಹಳ ಸಹಾಯಕವಾಗಿದೆ.

ಬ್ಲಶ್ ಮತ್ತು ಬ್ರಾಂಜರ್: ಬ್ರಾಂಜರ್ ಗಳು ದ್ರವ, ಕ್ರೀಮ್ ಹಾಗೂ ಪೌಡರ್ ರೂಪದಲ್ಲಿ ದೊರೆಯುತ್ತದೆ. ಇದನ್ನು ನಿಮ್ಮ ಕೆನ್ನೆಗೆ ಅನ್ವಯಿಸುವುದರಿಂದ ಬ್ಲಶ್ ಲುಕ್ ನೀಡುತ್ತದೆ.

ಐ ಶ್ಯಾಡೋ: ನಿಮ್ಮ ಕಣ್ಣಿನ ರೆಪ್ಪೆಗಳಿಗೆ ಐ ಶ್ಯಾಡೋವನ್ನು ಬಳಸಲಾಗುತ್ತದೆ. ಐ ಶ್ಯಾಡೋಗಳಲ್ಲಿ ಹಲವಾರು ವಿಧಗಳಿದ್ದು, ಬಗೆಬಗೆಯ ಐ ಶ್ಯಾಡೋಗಳು ದ್ರವ್ಯ ರೂಪದಲ್ಲಿ ದೊರೆಯುತ್ತದೆ.

ಐ ಲೈನರ್: ಇದು ಕಣ್ಣುಗಳಿಗೆ ಶೇಪ್ ನೀಡಲು ಬಳಸಲಾಗುತ್ತದೆ. ಐ ಲೈನರ್ ಗಳಲ್ಲಿ ದ್ರವ, ಜೆಲ್ ಹಾಗೂ ಪೆನ್ಸಿಲ್‍ಗಳಿರುವುದನ್ನು ಕಾಣಬಹುದಾಗಿದೆ. ಇವುಗಳಲ್ಲಿ ಪೆನ್ಸಿಲ್ ಬಳಸಲು ಬಹಳ ಸುಲಭವಾಗಿರುತ್ತದೆ.

ಮಸ್ಕರಾ: ಮಸ್ಕರಾವನ್ನು ಕಣ್ಣಿನ ರೆಪ್ಪೆಯ ಕೂದಲುಗಳಿಗೆ ಹಚ್ಚಲಾಗುತ್ತದೆ. ಮಸ್ಕರಾ ನಿಮ್ಮ ಕಣ್ಣಿನ ರೆಪ್ಪೆ ಕೂದಲನ್ನು ದಪ್ಪವಾಗಿ, ಉದ್ದವಾಗಿ ಅಥವಾ ಅಗಲವಾಗಿ ಕಾಣಲು ಸಹಾಯಕವಾಗಿದೆ.

ಲಿಪ್ ಪ್ರೈಮರ್: ಫೇಸ್ ಪ್ರೈಮರ್, ಐ ಶ್ಯಾಡೋ ಪ್ರೈಮರ್‌ನಂತೆಯೇ ಲಿಪ್ ಪ್ರೈಮರ್ ಕೂಡ ತುಟಿಗೆ ಸಂಬಂಧ ಪಟ್ಟ ಪ್ರೊಡಕ್ಟ್‌ ಆಗಿದೆ. ಇದು ಕೂಡ ಮೇಕಪ್ ಪ್ರೊಡಕ್ಟ್‌ಗಳಲ್ಲಿ ಒಂದಾಗಿದೆ.

ಲಿಪ್ ಪೆನ್ಸಿಲ್: ಲಿಪ್ ಪೆನ್ಸಿಲ್‍ನನ್ನು ತುಟಿಗಳಿಗೆ ಶೇಪ್ ನೀಡಲು ಬಳಸಲಾಗುತ್ತದೆ. ಲಿಪ್‍ಸ್ಟಿಕ್ ಹಚ್ಚುವ ಮುನ್ನ ಲಿಪ್‍ಗೆ ಔಟ್‍ಲೈನ್ ನೀಡಲು ಲಿಪ್ ಪೆನ್ಸಿಲ್‍ನನ್ನು ಬಳಸಲಾಗುತ್ತದೆ.

ಲಿಪ್ ಸ್ಟಿಕ್: ಲಿಪ್ ಸ್ಟಿಕ್ ತುಟಿಗಳಿಗೆ ಬಣ್ಣ ನೀಡುತ್ತದೆ. ಲಿಪ್‍ಸ್ಟಿಕ್ ಸಾಮಾನ್ಯವಾಗಿ ದ್ರವ ರೂಪದಲ್ಲಿ ದೊರೆಯುತ್ತದೆ.

ಲಿಪ್ ಗ್ಲೋಸ್: ಲಿಪ್ ಗ್ಲೋಸ್ ತುಟಿಗಳಿಗೆ ಹೊಳಪು ನೀಡುವ ಮೂಲಕ ಫಿನಿಶಿಂಗ್ ನೀಡುತ್ತದೆ. ಲಿಪ್ ಗ್ಲೋಸ್‍ನಲ್ಲಿ ಕೂಡ ಹಲವು ಬಣ್ಣದ ವಿಧಗಳಿದ್ದು, ಇದು ಸಹ ದ್ರವ್ಯ ರೂಪದಲ್ಲಿ ದೊರೆಯುತ್ತದೆ. ಇದನ್ನೂ ಓದಿ:ಆಕರ್ಷಕ ಕಣ್ಣುಗಳಿಗೆ ಮಸ್ಕರಾ ಎಷ್ಟು ಮುಖ್ಯ?

Comments

Leave a Reply

Your email address will not be published. Required fields are marked *