ಮೆಹಂದಿ ಶಾಸ್ತ್ರಕ್ಕೂ ಮುನ್ನ ಫೋಟೋಶೂಟ್ ಮಾಡಿಸ್ಕೊಂಡ ಕ್ಯೂಟ್ ಕಪಲ್

ಬೆಂಗಳೂರು: ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿರುವ ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಸದ್ಯ ತಮ್ಮ ಮದುವೆ ಶಾಸ್ತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಶಾಸ್ತ್ರದ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ ಜೋಡಿ ಸಪ್ತಪದಿ ತುಳಿಯಲು ಇನ್ನೂ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಮದುವೆ ಶಾಸ್ತ್ರದಲ್ಲಿ ಇಬ್ಬರು ತಾರೆಯರು ಸಖತ್ ಬ್ಯೂಸಿಯಾಗಿದ್ದಾರೆ. ಅಭಿಮಾನಿಗಳಿಗಾಗಿ ಮದುವೆಯ ಕೆಲವು ಶಾಸ್ತ್ರಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ಜೋಡಿ ಮಿಲನಾ ಹಾಗೂ ಕೃಷ್ಣ ಅವರ ಮೆಹಂದಿ ಕಾರ್ಯಕ್ರಮ ಫೆಬ್ರವರಿ 10ರಂದು ಹಾಸನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರ ಆರಂಭವಾಗುವ ಮುನ್ನ ಈ ಜೋಡಿ ಕ್ಯಾಮೆರಾಗೆ ಸಖತ್ ಕ್ಯೂಟಾಗಿ ಪೆÇೀಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಕಾರ್ಯದಲ್ಲಿ ಕಳೆದ ಕೆಲವುದಿನಗಳಿಂದ ತೊಡಗಿಕೊಂಡಿರುವ ಜೋಡಿ ಮದುವೆ ಶಾಸ್ತ್ರದ ಮೊದಲ ವೀಡಿಯೋವನ್ನು ಮಿಲನಾ ನಾಗರಾಜ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಮದುವೆ ಶಾಸ್ತ್ರಗಳು ಪ್ರಾರಂಭ ಎಂದು ಬರೆದುಕೊಂಡಿದ್ದರು. ಮಿಲನಾ ನಾಗರಾಜ್ ಮತ್ತು ಕೃಷ್ಣ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದು ಬಂದಿತ್ತು.

ಕೃಷ್ಣ ಮತ್ತು ಮಿಲನಾ ಮದುವೆಗೆ ಸ್ಯಾಂಡಲ್‍ವುಡ್‍ನ ಗಣ್ಯರೆಲ್ಲರೂ ಭಾಗಿಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಜೋಡಿ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಇಡೀ ಚಿತ್ರರಂಗದ ಸಮಾಗಮ ಆಗಲಿದೆ.

 

View this post on Instagram

 

A post shared by Milana Nagaraj (@milananagaraj)

ಕೃಷ್ಣ ಮತ್ತುಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಲವ್ ಮಾಕ್‍ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೀಗ ಈ ಜೋಡಿ ಲವ್ ಮಾಕ್‍ಟೇಲ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಲವ್ ಮಾಕ್‍ಟೇಲ್-2 ಸಿನಿಮಾದ ಹಾಡು ಕೂಡ ರಿಲೀಸ್ ಆಗುತ್ತಿದೆ.

Comments

Leave a Reply

Your email address will not be published. Required fields are marked *