ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್

– ಸ್ನೇಹಿತನ ಮೃತದೇಹವನ್ನು ಫುಟ್‍ಬಾಲ್ ಸ್ಟೇಡಿಯಂಗೆ ತಂದ ಸ್ನೇಹಿತರು

ಮೆಕ್ಸಿಕೊ: ಮೃತ ಸ್ನೇಹಿತನಿಂದ ಕೊನೆಯ ಗೋಲ್ ಹೊಡೆಸಿ ಕೊನೆಯಲ್ಲಿ ಶವದ ಪೆಟ್ಟಿಗೆಯನ್ನು ಅನ್ನು ತಬ್ಬಿಕೊಂಡು ಸ್ನೇಹಿತರೆಲ್ಲ ದುಃಖ ಪಡುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನಾವು ನೋಡುವ ವಿಡಿಯೋಗಳು ನಮ್ಮನ್ನು ಮೂಕವಿಸ್ಮಿತರಾನ್ನಾಗಿ ಮಾಡುತ್ತವೆ. ಈಗ ಮೆಕ್ಸಿಕೋದಲ್ಲಿ ಸಾವನ್ನಪ್ಪಿದ ಸ್ನೇಹಿತನಿಗೆ ಆತನ ಗೆಳೆಯರೆಲ್ಲರೂ ಸೇರಿ ವಿಶೇಷವಾಗಿ ಅಂತಿಮ ನಮನ ಸಲ್ಲಿಸುವ ವಿಡಿಯೋ ಎಲ್ಲರ ಕಣ್ಣಿನ ಅಂಚಿನಲ್ಲಿ ನೀರು ತರಿಸಿದೆ.

ಈ ವಿಡಿಯೋ ಕ್ಲಿಪ್ ಅನ್ನು ಮೆಕ್ಸಿಕೊದಿಂದ ಟಿವಿ ಬಸ್ ಅವರು ಮೊದಲಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ಅಲೆಕ್ಸ್ ಸ್ಟೋನ್ ಅವರು ಶೇರ್ ಮಾಡಿ “ಮೆಕ್ಸಿಕೊದಲ್ಲಿ 16 ವರ್ಷದ ಬಾಲಕನನ್ನು ಕೊಲೆ ಮಾಡಲಾಗಿದೆ. ಅವರ ತಂಡದ ಸದಸ್ಯರು ಅವರನ್ನು ಫುಟ್‍ಬಾಲ್ ಆಡುವ ಸ್ಥಳಕ್ಕೆ ಕರೆದುಕೊಂಡು ಹೋದರು ಮತ್ತು ಕೊನೆಯ ಬಾರಿಗೆ ಗೋಲ್ ಹೊಡೆಯಲು ಅವಕಾಶ ಮಾಡಿಕೊಟ್ಟರು. ಈ ರೀತಿಯದನ್ನು ನಾನು ಎಂದೂ ನೋಡಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೆವಲ 54 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಸ್ನೇಹಿತರೆಲ್ಲರೂ ಶವದ ಪೆಟ್ಟಿಗೆಯನ್ನು ಗೋಲ್ ನೆಟ್ ಮುಂಭಾಗ ಇಟ್ಟು, ಅದರ ಸುತ್ತ ಬಾಲ್ ಹಿಡಿದು ನಿಂತಿರುತ್ತಾರೆ. ನಂತರ ಓರ್ವ ಫುಟ್‍ಬಾಲ್ ಅನ್ನು ಮೊದಲಿಗೆ ಬೇರೊಬ್ಬನಿಗೆ ಪಾಸ್ ಮಾಡುತ್ತಾನೆ. ನಂತರ ಅವನು ಅ ಬಾಲನ್ನು ಶವದ ಪೆಟ್ಟಿಗೆ ತಳುತ್ತಾನೆ. ಪೆಟ್ಟಿಗೆ ತಾಗಿದ ಬಾಲು ನೇರವಾಗಿ ಗೋಲ್ ಒಳಗೆ ಹೋಗುತ್ತದೆ. ಆಗ ಎಲ್ಲರೂ ಚೀಯರ್ ಮಾಡುವ ರೀತಿ ಕೂಗುತ್ತಾರೆ. ಕೊನೆಯಲ್ಲಿ ಎಲ್ಲರೂ ಶವದ ಪೆಟ್ಟಿಗೆಯನ್ನು ತಬ್ಬಿಕೊಳ್ಳುತ್ತಾರೆ.

ಅಂದಹಾಗೆ ಅಂತರಾಷ್ಟೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಮೃತನನ್ನು 16 ವರ್ಷದ ಅಲೆಕ್ಸಾಂಡರ್ ಮಾರ್ಟಿನೆಜ್ ಎಂದು ಗುರತಿಸಲಾಗಿದೆ. ಆತನನ್ನು ಯಾರೋ ಕೊಲೆ ಮಾಡಿದ್ದಾರೆ. ಆಗ ಆತನ ಶವವನ್ನು ತಾವು ದಿನ ಫುಟ್‍ಬಾಲ್ ಆಡುತ್ತಿದ್ದ ಸ್ಟೇಡಿಯಂಗೆ ತೆಗೆದುಕೊಂಡು ಬಂದ ಮಾರ್ಟಿನೆಜ್ ಸ್ನೇಹಿತರು ಕೊನೆಯದಾಗಿ ಒಂದು ಗೋಲ್ ಹೊಡೆಸಿ ಗುರುವಾರ ಅಂತ್ಯಕ್ರಿಯೆ ಮಾಡಿದ್ದಾರೆ.

https://twitter.com/cazbabyblu/status/1271702436558721025

ಸ್ನೇಹಿತರ ಈ ಪ್ರೀತಿಯನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದು, ಈ ವಿಡಿಯೋ ನನ್ನ ಕಣ್ಣಿನಲ್ಲಿ ನೀರು ತರಿಸಿತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ನಮಗೆ ಕ್ರೀಡೆ ಕಲಿಸುವ ಪಾಠ, ವಿಡಿಯೋ ನೋಡಿ ನಮಗೆ ಬಹಳ ನೋವಾಯ್ತು ಎಂದಿದ್ದಾರೆ. ಈ ವಿಡಿಯೋ ನೋಡಿ ಫುಟ್‍ಬಾಲ್‍ಗಿಂತ ಇವರ ಪ್ರೀತಿ ಮತ್ತು ಸ್ನೇಹ ದೊಡ್ಡದು ಎನಿಸಿತು ಎಂದು ಹಲವಾರು ಜನ ಕಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *