ಮೂರು ದಿನಗಳ ಹಿಂದೆ ಬೀಗ ಹಾಕಿ ಹೋಗಿದ್ದಾರೆ – ಅರುಣಾ ಮನೆ ಮಾಲೀಕ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಪ್ರಕರಣ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಅರುಣಾ ಕುಮಾರಿ ಅವರು ಮನೆ ಖಾಲಿ ಮಾಡಿ ಹೋಗಿದ್ದಾರೆ.

ಹೌದು. ಈ ಸಂಬಂಧ ಅರುಣಾ ಕುಮಾರಿ ಮನೆ ಮಾಲೀಕ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಅರುಣಾ ಕುಮಾರಿ ಮತ್ತು ಕುಟುಂಬ ಮೂರು ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಹೋಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಮೂರು ವಿಷಯ ಹೇಳಬೇಡಿ ಅಂದಿದ್ದಾರೆ ದರ್ಶನ್ ಸರ್: ಉಮಾಪತಿ

ಕಳೆದ ಒಂದೂವರೆ ವರ್ಷದಿಂದ ಅರುಣಾ ಕುಮಾರಿಯವರು ಬೆಂಗಳೂರಿನ ಜಂಬೂ ಸವಾರಿ ದಿಣ್ಣೆ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ತಂದೆ-ತಾಯಿ ಜೊತೆ ವಾಸವಿದ್ದ ಇದೀಗ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೀಗ ಹಾಕಿ ಹೋಗಿದ್ದಾರೆ. ಇದನ್ನೂ ಓದಿ:  ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

ಇತ್ತ ಪ್ರಕರಣ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಅರುಣಾ ಕುಮಾರಿ, ಉಮಾಪತಿಯವರು ಮಾಡಿದ್ದು ತಪ್ಪು. ನನ್ನನ್ನು ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ. ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಇದು ಜನರಲ್ ಟಾಕ್ ಅಷ್ಟೇ. ಮಾರ್ಚ್ 30ರಿಂದ ನನಗೆ ಉಮಾಪತಿಯವರ ಜೊತೆ ಕಾಂಟ್ಯಾಕ್ಟ್ ಇದೆ. ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಮಾಡ್ತಿದ್ದೀರಿ? ಹರ್ಷ ಏನೋ ಮಾಡುತ್ತಿದ್ದಾನೆ ಎನ್ನುವುದನ್ನು ಉಮಾಪತಿ ಹೇಳಬಹುದಿತ್ತು. ನನ್ನನ್ನು ಏಕೆ ಬಳಸಿಕೊಂಡಿರಿ?. ಉಮಾಪತಿ ತಪ್ಪು ಅಂತಾ ಹೇಳುತ್ತಿಲ್ಲ. ದರ್ಶನ್ ತಪ್ಪು ಅಂತಾ ಹೇಳುತ್ತಿಲ್ಲ. ನೀವೇ ಹೋಗಿ ಹರ್ಷ ಬಳಿ ಮಾತನಾಡಬಹುದಿತ್ತು. ಈ ಪ್ರಕರಣದಿಂದ ನನ್ನ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ ಅಂತ ಅಲವತ್ತುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *