ಮೂರು ದಿನಗಳಿಂದ ಸುರಿಯುತ್ತಿರೋ ಮಳೆ- ಮಡಿಕೇರಿಯಲ್ಲಿ ಕುಸಿದು ಬಿದ್ದ ಮನೆ

ಮಡಿಕೇರಿ: ಕಳೆದ ಎರಡು ದಿನಗಳಲ್ಲಿ ಕೊಡಗಿನಲ್ಲಿ ಸುರಿದ ಮಳೆಗೆ ಹಲವೆಡೆ ಚಿಕ್ಕಪುಟ್ಟ ಸಮಸ್ಯೆಗಳಾಗಿದ್ದು, ಮಡಿಕೇರಿ ನಗರದಲ್ಲಿ ಮನೆಯೊಂದರ ಒಂದು ಭಾಗ ಕುಸಿದು ಬಿದ್ದಿದೆ.

ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಾಗಮ್ಮ ಎಂಬವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಬಾತ್ ರೂಮ್, ಟಾಯ್ಲೆಟ್ ರೂಂ ಇದ್ದ ಭಾಗ ಸಂಪೂರ್ಣ ನೆಲಸಮವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಕುಸಿದು ಬಿದ್ದಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಒಂದು ವೇಳೆ ಯಾರಾದರೂ ಮನೆಯಲ್ಲಿ ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಮನೆಯ ಹಿಂಭಾಗದಲ್ಲಿ ದೊಡ್ಡ ಬರೆ ಇದ್ದು ಬರೆಯ ಮಣ್ಣು ಕುಸಿದಿರುವುದರಿಂದ ಮನೆಯ ಒಂದು ಭಾಗ ಕುಸಿದು ಬಿದ್ದಿದೆ ಎನ್ನಲಾಗಿದೆ. ಇದೇ ರೀತಿ ಇನ್ನೂ ನಾಲ್ಕೈದು ಮನೆಗಳು ತೊಂದರೆಯಲ್ಲಿ ಇವೆ.

ಈಗಾಗಲೇ ಆ ಮನೆಗಳ ಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಹೀಗಾಗಿ ಏನಾದರು ತೊಂದರೆ ಆದಲ್ಲಿ ಬಾರೀ ಅನಾಹುತ ಆಗುವ ಸಾಧ್ಯತೆ ಇದೆ. ಹೀಗಾಗಿ ನಗರಸಭೆ ಅಥವಾ ಜಿಲ್ಲಾಡಳಿತ ರಕ್ಷಣಾ ನೀಡಬೇಕು. ಅಥವಾ ತಡೆಗೋಡೆ ಕಟ್ಟಿಕೊಟ್ಟು ರಕ್ಷಣೆ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *