ಮೂರು ಗಂಟಿನಲ್ಲಿ ಬಂಧಿಯಾದ ಮೂರು ಅಡಿ ಎತ್ತರದ ಜೋಡಿ

-ಲಾಕ್‍ಡೌನ್ ನಡ್ವೆ ಸಂಭ್ರಮದ ವಿಶೇಷ ಮದ್ವೆ

ಲಕ್ನೋ: ಮೂರು ಅಡಿ ಎತ್ತರ ಹೊಂದಿರುವ ಜೋಡಿಯ ಮದುವೆ ಫೋಟೋ ಮತ್ತು ವಿಡಿಯೋಗಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

25 ವರ್ಷದ ಫಿರೋಜ್ ಮತ್ತು 22ರ ಜೈನಬ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮೀರತ್ ನ ಧವಾಯಿ ನಗರದಲ್ಲಿ ಜೋಡಿಯ ಮದ್ವೆ ನಡೆದಿದೆ. ಇನ್ನು ಮದುವೆಯಲ್ಲಿ ವರನ ಕಡೆಯಿಂದ 25 ಜನ ಮತ್ತು ವಧುವಿನ 25 ಜನರು ಮಾತ್ರ ಭಾಗಿಯಾಗುವ ಮೂಲಕ ಲಾಕ್‍ಡೌನ್ ನಿಯಮಗಳನ್ನ ಪಾಲಿಸಿದ್ದಾರೆ.

ಫಿರೋಜ್ ಮಲಯಾಳಂನ ಕೆಲವು ಸಿನಿಮಾಗಳಲ್ಲಿಯೀ ನಟಿಸಿದ್ದಾರೆ. ಇಬ್ಬರ ಮದ್ವೆಗೆ ಫಿರೋಜ್ ಗೆಳೆಯನಿಂದಾಗಿ ನಡೆದಿದೆ. ಈ ಹಿಂದೆ ಫಿರೋಜ್ ಗೆಳೆಯನ ಮನೆಗೆ ಹೋಗಿದ್ದರು. ಈ ವೇಳೆ ಫಿರೋಜ್ ನನ್ನು ನೋಡಿದ ಗೆಳೆಯನ ಅತ್ತಿಗೆ ಮದುವೆ ವಿಷಯವನ್ನ ಪ್ರಸ್ತಾಪ ಮಾಡಿದ್ದಾರೆ. ತನ್ನ ತಂಗಿಯೂ ಮೂರು ಅಡಿ ಎತ್ತರವಿದ್ದು, ಜೋಡಿ ಚೆನ್ನಾಗಿರುತ್ತೆ ಎಂನ ಮಾತು ಹೇಳಿ ದ್ದಾರೆ. ಕೊನೆಗೆ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಸರಳವಾಗಿ ಶುಭ ಕಾರ್ಯ ನಡೆದಿದೆ.

ಪುತ್ರನಿಗೆ ದೇವರು ನೀಡಿದ ಕೊಡುಗೆ ಇದಾಗಿದೆ. ಮದುವೆಯ ಪ್ರಸ್ತಾಪ ಬಂದಾಗ ಇಷ್ಟು ಪರ್ಫೆಕ್ಟ್ ಜೋಡಿ ಸಿಗುತ್ತೆ ಎಂದು ಅಂದುಕೊಂಡಿರಲಿಲ್ಲ ಅಂತ ಫಿರೋಜ್ ತಂದೆ ಸಿರಾಜುದ್ದೀನ್ ಹೇಳುತ್ತಾರೆ. ಇನ್ನು ಫಿರೋಜ್, ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *