ಮುಖ್ಯ ಶಿಕ್ಷಕನಿಂದ ಸರ್ಕಾರಿ ಶಾಲೆಯಲ್ಲಿ ನಿತ್ಯ ಗುಂಡು, ತುಂಡು ಪಾರ್ಟಿ

– ಕಂಠ ಪೂರ್ತಿ ಕುಡಿದು ಶಾಲೆಯಲ್ಲೇ ಮಲಗುವ ಶಿಕ್ಷಕ
– ಮುಖ್ಯ ಶಿಕ್ಷಕರ ಚೆಂಬರ್ ತುಂಬೆಲ್ಲ ಬಾಟಲಿಗಳು

ಯಾದಗಿರಿ: ಶಾಲೆ ಎಂದರೆ ಜ್ಞಾನ ದೇಗುಲ ಎಂಬ ಭಾವನೆ. ಇಂತಹ ಶಾಲೆಯಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕನೇ ಶಾಲೆಯಲ್ಲಿ ನೀತಿಗೆಟ್ಟ ಕೆಲಸ ಮಾಡಿದ್ದಾನೆ.

ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರಿನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ. ಕೊರೊನಾ ಹಿನ್ನೆಲೆ ಶಾಲೆಗೆ ಶಿಕ್ಷಕರು ಮಾತ್ರ ಬರುತ್ತಿದ್ದು, ಶಾಲೆಯಲ್ಲಿ ಮುಖ್ಯ ಶಿಕ್ಷಕ ಆಡಿದ್ದೆ ಆಟ ಎನ್ನುವಂತಾಗಿದೆ. ಕಳೆದ ಹಲವು ದಿನಗಳಿಂದ, ಶಾಲೆಯೊಳಗೆ ಮುಖ್ಯ ಶಿಕ್ಷಕನ ನೇತೃತ್ವದಲ್ಲೇ ಗುಂಡು-ತುಂಡಿನ ಪಾರ್ಟಿ ಮಾಡಿ ಮೋಜು ಮಸ್ತಿ ನಡೆಯುತ್ತಿದೆ.

ಶಾಲೆಯೊಳಗೆ ರಾಜಾರೋಷವಾಗಿ ಕಂಠಪೂರ್ತಿ ಕುಡಿಯುವ ಮುಖ್ಯ ಶಿಕ್ಷಕ ದೇವಿಂದ್ರಪ್ಪ, ಒಮ್ಮೊಮ್ಮೆ ಶಾಲೆಯಲ್ಲಿಯೆ ಮಲಗಿ ಬಿಡುತ್ತಾನೆ. ಅಲ್ಲದೆ ಇತನ ಚೇಂಬರ್ ತುಂಬೆಲ್ಲ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಕುಡುಕ ಹೆಡ್ ಮಾಸ್ಟರ್‍ನ ಎಣ್ಣೆ ಆಟವನ್ನು ಗ್ರಾಮಸ್ಥರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಕುಡುಕ ಹೆಡ್ ಮಾಸ್ಟರ್ ಕಳ್ಳಾಟ ಬಯಲಾಗಿದ್ದು, ಶಿಕ್ಷಕನ ಅಮಾನತಿಗೆ ಗ್ರಾಮಸ್ಥರು ಮತ್ತು ಪೋಷಕರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *