ಮುಖ್ಯಮಂತ್ರಿ ಕುರ್ಚಿಗೆ ಡಿಕೆಶಿ ಬಹಳ ದಿನದಿಂದ ಕಾಯ್ತಿದ್ದಾರೆ: ಸಂಗಣ್ಣ

ಕೊಪ್ಪಳ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಕುರ್ಚಿಗೆ ಡಿಕೆ ಶಿವಕುಮಾರ್ ಬಹಳ ದಿನದಿಂದ ಕಾಯ್ತಿದ್ದಾರೆ ಎಂದು ಹೇಳಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅವರ ಆಪ್ತರು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೇ ಬಿಡುತ್ತೀವಿ ಎಂದು ಕನಸು ಕಾಣುತ್ತಿದ್ದಾರೆ. ಅಂತಿಮವಾಗಿ ಜನರ ತೀರ್ಮಾನ ಮಾಡಬೇಕು. ಸಿದ್ದರಾಮಯ್ಯ ಅವರು ಆಗಬೇಕ ಅಂದರೂ ಸಿಎಂ ಆಗಲ್ಲ. ಪಕ್ಷಕ್ಕೆ ಬಹುಮತ ಬಂದ ನಂತರ ಆ ಪಕ್ಷದ ಶಾಸಕರು ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಆಪ್ತರು ಈಗಲೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಮತದಾರರನ್ನ ಖರೀದಿ ಮಾಡಿದವರ ತರಹ ಕಾಣುತ್ತಿದೆ. ಇದು ಸಮಂಜಸ ಅಲ್ಲ. ಬಿಜೆಪಿಯವರು ಸರ್ಕಾರದ ಹಣದಿಂದ ಕಿಟ್ ಹಂಚಿದ್ದಾರೆ ಎಂದು ಹೇಳುತ್ತಾರೆ. ಇದು ಸಮಂಜಸ ಅಲ್ಲ. ರಾಜಕಾರಣಿಗಳು ಯಾರೂ ಮನೆಯಿಂದ ಹಣ ಹಾಕಲ್ಲ. ರಾಘವೇಂದ್ರ ಹಿಟ್ನಾಳ್ ಹಾಗೂ ಸಿದ್ದರಾಮಯ್ಯ ನಡುವೆ ಏನಿದೆ ಎನ್ನುವುದನ್ನು ಮುಂದೆ ಮಾತಾನಾಡುತ್ತೇನೆ. ಅವರಿಗೆ ಎಲ್ಲಿಂದ ದುಡ್ಡು ಬರುತ್ತಿದೆ. ಏನೂ ಅಂತಾ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ರಾಯರೆಡ್ಡಿ ಅವರಿಗೆ ಸಿದ್ದರಾಮಯ್ಯ ಮೇಲೆ ಯಾಕೆ ಲವ್ ಆಗಿದೆ ಗೊತ್ತಿಲ್ಲ. ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಯರೆಡ್ಡಿ ಬಗ್ಗೆ ಮಾತನಾಡಿದ್ದರು. ಇವತ್ತು ಯಾಕೆ ರಾಯರೆಡ್ಡಿ ಅವರಿಗೆ ಲವ್ ಆಗಿದೆ ಎಂಬುವುದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ

Comments

Leave a Reply

Your email address will not be published. Required fields are marked *