ಮುಂಬೈ ಟು ಗದಗ ಎಕ್ಸ್‌ಪ್ರೆಸ್ ಡೆಂಜರ್ ಟ್ರೈನ್ ಬರಲಿದೆ ಹುಷಾರ್!

ಗದಗ: ನಾಳೆಯಿಂದ ಗದಗ-ಮುಂಬೈ ಎಕ್ಸ್‌ಪ್ರೆಸ್ ಡೈಲಿ ರೈಲು ಆರಂಭವಾಗಲಿದ್ದು, ಮುಂಬೈ ಕಂಟಕ ಗದಗ ಜಿಲ್ಲೆಗೂ ತಗುಲುತ್ತಾ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಶಾಂತವಾಗಿರುವ ಜಿಲ್ಲೆಗೆ ಕೊರೊನಾ ಹಾಟ್‍ಸ್ಪಾಟ್ ಮುಂಬೈನಿಂದ ಪ್ರಯಾಣಿಕರು ಬಂದ್ರೆ ಮತ್ತೆ ಗದಗ ಧಗಧಗಿಸುವ ಲಕ್ಷಣಗಳಿವೆ. ರೈಲು ಸೋಮವಾರ ಮುಂಬೈ ಬಿಡಲಿದ್ದು, ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಮಾರ್ಗವಾಗಿ ಮಂಗಳವಾರ ಬೆಳಗ್ಗೆ 11:30 ರ ವೇಳೆಗೆ ಗದಗ ತಲುಪಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ಪತ್ರ ಬಿಡುಗಡೆ ಮಾಡಿದೆ. ಸದ್ಯಕ್ಕೆ ಮುಂಬೈ ಟ್ರೈನ್ ಬೇಡವೆಂದು ರಾಜ್ಯ ಸರ್ಕಾರ ಕ್ಯಾಬಿನೆಟ್‍ನಲ್ಲಿ ಚರ್ಚೆಮಾಡಿ, ರೈಲೆ ಇಲಾಖೆಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಕೇಂದ್ರ ರೈಲ್ವೇ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈಗ ರಿಜರ್ವೇಷನ್ ಕೋಟಾ ಸಹ ಬಿಡುಗಡೆ ಮಾಡಿದೆ. ಸೋಮವಾರ ರೈಲು ಮುಂಬೈ ಬಿಡಲಿದೆ. ಆದರೆ ಗದಗ ರೈಲ್ವೇ ನಿಲ್ದಾಣದಲ್ಲಿ ಯಾವುದೆ ಭದ್ರತೆ ಇಲ್ಲ. ಮುಂಬೈನಿಂದ ಬಂದ ಪ್ರಯಾಣಿಕರನ್ನ ಯಾವ ತರಹವಾಗಿ ಎಲ್ಲಿ ಕ್ವಾರಂಟೈನ್ ಮಾಡ್ತಾರೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

Comments

Leave a Reply

Your email address will not be published. Required fields are marked *