ಮುಂದಿನ ವರ್ಷದ ಮಾರ್ಚ್ ವರೆಗೆ ಶೇ.25 ಟಿಡಿಎಸ್ ಕಡಿತ

ನವದೆಹಲಿ: ಸ್ವಾವಲಂಬಿ ಭಾರತಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಹಲವು ಯೋಜನೆಗಳನ್ನ ಘೋಷಿಸಿ, ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ವರ್ಷದ ಮಾರ್ಚ್‍ವರೆಗೆ ಟಿಡಿಎಸ್ ಮತ್ತು ಟಿಸಿಎಸ್ ಕಡಿತವನ್ನು ಸದ್ಯ ಇರೋ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ.

ಪ್ರಫೋಷನಲ್ ಫೀ, ಕ್ಯಾಂಟ್ರಾಕ್ಟ್ ಪೇಮೆಂಟ್, ಬಡ್ಡಿ, ಬಾಡಿಗೆ, ಡಿವಿಡೆಂಡ್, ಕಮಿಷನ್, ಬ್ರೋಕರೇಜ್ ಸೇರಿದಂತೆ ಎಲ್ಲವೂ ಟಿಡಿಎಸ್ ಕಡಿತಕ್ಕೆ ಅನ್ವಯವಾಗಲಿದೆ. ಈ ಕಡಿತದ ಅನ್ವಯ ನಾಳೆಯಿಂದ ಮಾರ್ಚ್ 31, 2021ರವರೆಗೆ ಇರಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 50 ಸಾವಿರ ಕೋಟಿ ಹೊರೆ ಆಗಲಿದೆ.

ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಗೆ ಈ ಮೊದಲು ಜುಲೈ 31 ರಿಂದ ಅಕ್ಟೋಬರ್ 31ರವರೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಟ್ಯಾಕ್ಸ್ ಆಡಿಟ್ ಅವಧಿಯನ್ನು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ವಿವಾದ್ ಸೇ ವಿಶ್ವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ಮೊತ್ತವಿಲ್ಲದೇ ಪಾವತಿಸಲು ಅವಕಾಶ ನೀಡಿದ್ದು, 31ನೇ ಡಿಸೆಂಬರ್ 2020ರವರೆಗೆ ಅವಧಿ ವಿಸ್ತರಿಸಲಾಗಿದೆ.

Comments

Leave a Reply

Your email address will not be published. Required fields are marked *