ಮುಂಜಾನೆ 3 ಗಂಟೆವರೆಗೂ ಅಣ್ಣನ ರೂಮಿನಲ್ಲಿ ಗೇಮ್- ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆ

– 3 ದಿನದ ಹಿಂದೆ ಅಮ್ಮನ ಫೋನಿನಲ್ಲಿ ಗೇಮ್ ಡೌನ್‍ಲೌಡ್

ಜೈಪುರ: ರಾತ್ರಿಯಿಡೀ ಪಬ್‍ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಶವನ ಶನಿವಾರ ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆಯ ವ್ಯಕ್ತಿಯೊಬ್ಬರ ಮಗನಾಗಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಶನಿವಾರ ಮುಂಜಾನೆ ತನ್ನ ಬೆಡ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಠಾಣೆ ಉಸ್ತುವಾರಿ ಹನ್ಸ್ ರಾಜ್ ಮೀನಾ ಹೇಳಿದರು.

ಬಾಲಕ ಮೂರು ದಿನಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನ್‍ನಲ್ಲಿ ಪಬ್‍ಜಿ ಗೇಮ್ ಡೌನ್‍ಲೋಡ್ ಮಾಡಿಕೊಂಡಿದ್ದನು. ಅಂದಿನಿಂದಲೂ ನಿರಂತರವಾಗಿ ಪಬ್‍ಜಿ ಗೇಮ್ ಆಡುತ್ತಿದ್ದನು ಎಂದು ಕುಟುಂಬದವರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಬಾಲಕ ತನ್ನ ಸಹೋದರ ವ್ಯಾಸಂಗ ಮಾಡುತ್ತಿದ್ದ ರೂಮಿನಲ್ಲಿದ್ದನು. ಸುಮಾರು ಶನಿವಾರ ಮುಂಜಾನೆ 3 ಗಂಟೆಯವರೆಗೆ ಪಬ್‍ಜಿ ಗೇಮ್ ಆಡುತ್ತಿದ್ದನು. ನಂತರ ಬಾಲಕ ತನ್ನ ಬೆಡ್ ರೂಮಿನಲ್ಲಿ ಮಲಗು ಹೋಗಿದ್ದಾನೆ. ಆದರೆ ಬೆಳಗ್ಗೆ ಬಾಲಕ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆತನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಬಾಲಕ ಮೃತಪಟ್ಟಿದ್ದನು ಎಂದು ಮೀನಾ ಹೇಳಿದರು.

ಬಾಲಕ ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಅವನ ತಂದೆ ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ಬಾಲಕನ ಶವವನ್ನು ಮರಣೋತ್ತರ ಆಸ್ಪತ್ರೆಯ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *