ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಆಮ್ ಆದ್ಮಿ ಪಕ್ಷದವರು ಟ್ರೋಲ್ ಮಾಡಿದ್ದಾರೆ.
ವೀಡಿಯೋ ಟ್ವೀಟ್ ಮಾಡಿರುವ ಎಎಪಿ, ಮೋದಿಯಂತೆ ಮಾಡಬೇಡಿ ಮಾಸ್ಕ್ ಧರಿಸಿ ಎಂಬ ಸಂದೇಶ ರವಾನಿಸಿದ್ದಾರೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮೋದಿ ಪರ ಹಾಗೂ ವಿರೋಧ ಕಾಮೆಂಟ್ ಗಳು ಬರುತ್ತಿವೆ.

ವೀಡಿಯೋದಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿರುವ ಸ್ಟಾಲ್ ಗೆ ಮೋದಿ ಬಂದಿದ್ದಾರೆ. ಮೋದಿ ಸ್ಟಾಲ್ ಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅವರು ಮಾಸ್ಕ್ ಧರಿಸದೇ ಇರುವುದನ್ನು ಮನಗಂಡ ಸ್ಟಾಲ್ ನವರು ಮಾಸ್ಕ್ ನೀಡಿದ್ದಾರೆ. ಈ ವೇಳೆ ಪ್ರಧಾನಿ ಬೇಡ ಬೇಡ ಎಂದು ಹೇಳಿ ಮುಂದೆ ಸಾಗಿದ್ದಾರೆ. ಇದನ್ನು ಸ್ಟಾಲ್ ನವರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಈ ವೀಡಿಯೋವನ್ನು ಎಎಪಿ ಪಕ್ಷದವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಧಾನಿಯನ್ನು ಅಪಹಾಸ್ಯ ಮಾಡುವ ಮೂಲಕ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದಾರೆ.
Wear a mask. Don't be like Modi ji. pic.twitter.com/lPxdTEdZiI
— AAP (@AamAadmiParty) December 17, 2020

Leave a Reply